ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ ಪಕ್ಕಾ ಆಕ್ಷನ್ ಥ್ರಿಲ್ಲರ್, ಫ್ಯಾಮಿಲಿ ಎಂಟರ್ಟೈನರ್ ಸರ್ಕಾರು ವಾರಿ ಪಟವು 2022 ರ ಬಹುನಿರೀಕ್ಷಿತ ತೆಲುಗು ಚಲನಚಿತ್ರಗಳಲ್ಲಿ ಒಂದಾಗಿದೆ. ನಿರ್ದೇಶಕ ಪರಶುರಾಮ್ ಅವರ ನೇತೃತ್ವದಲ್ಲಿ ಮೂಡಿಬಂದಿರುವ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.. ಟ್ರೈಲರ್ ಕ್ಲಾಸ್ ಮತ್ತು ಮಾಸ್ ಎರಡರಲ್ಲೂ ತುಂಬಿದೆ.
ಸಿನಿಮಾದ ಕಲಾವತಿ ಹಾಡು ಸಹ ಈಗಾಗಲೇ ಸೂಪರ್ ಹಿಟ್ ಆಗಿದೆ.. ಈಗ ಸಿನಿಮಾದ ಟ್ರೇಲರ್ ಹೊಸ ಸೆನ್ಷೇಷನ್ ಸೃಷ್ಟಿ ಮಾಡಿದೆ.
ಮಹೇಶ್ ಬಾಬು ಸಿನಿಮಾ ಸರ್ಕಾರು ವಾರಿ ಪಾಟ ಮೇ 12ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಟ್ರೆಲರ್ ಕೇವಲ 14 ಗಂಟೆಗಳಲ್ಲಿ ಟಾಲಿವುಡ್ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಸರ್ಕಾರು ವಾರಿ ಪಾಟ ಟ್ರೈಲರ್ ಯೂಟ್ಯೂಬ್ನಲ್ಲಿ 25 ಮಿಲಿಯನ್ ವೀವ್ಸ್ ಗಳಿಸಿದೆ. ಈ ಮೂಲಕ ರಾಧೆ ಶ್ಯಾಮ್ ರೆಕಾರ್ಡ್ ಮುರಿದಿದೆ.. ರಾಧೆ ಶ್ಯಾಮ್ 24 ಗಂಟೆಯಲ್ಲಿ ತೆಲುಗಿನಲ್ಲಿ 23 ಮಿಲಿಯನ್ ವೀವ್ಸ್ ಪಡೆದಿತ್ತು. 24 ಗಂಟೆಗಳಲ್ಲಿ ಸುಮಾರು 27 ಮಿಲಿಯನ್ ವೀವ್ಸ್ ಪಡೆದಿದ್ದು ಹೊಸ ದಾಖಲೆ ಬರೆದಿದೆ.
ಸ್ಟೈಲಿಶ್ ಪಾಟ್ಬಾಯ್ಲರ್ ಅನ್ನು ನವೀನ್ ಯೆರ್ನೇನಿ, ವೈ. ರವಿಶಂಕರ್, ರಾಮ್ ಅಚಂತಾ ಮತ್ತು ಗೋಪಿಚಂದ್ ಅಚಂತಾ ಅವರು ಮೈತ್ರಿ ಮೂವಿ ಮೇಕರ್ಸ್, ಜಿಎಂಬಿ ಎಂಟರ್ಟೈನ್ಮೆಂಟ್ ಮತ್ತು 14 ರೀಲ್ಸ್ ಪ್ಲಸ್ ಬ್ಯಾನರ್ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ.
ಆರ್ ಮಧಿ ಛಾಯಾಗ್ರಹಣ, ಮಾರ್ತಾಂಡ್ ಕೆ ವೆಂಕಟೇಶ್ ಸಂಕಲನ ಮತ್ತು ಎಎಸ್ ಪ್ರಕಾಶ್ ಕಲಾ ವಿಭಾಗವನ್ನು ನಿರ್ವಹಿಸಿದ್ದಾರೆ.
ಮೇ 12 ರಂದು ಚಿತ್ರಮಂದಿರಗಳಲ್ಲಿ ಸರ್ಕಾರ ವಾರಿ ಪಟ ಬಿಡುಗಡೆ…