ಜಯಮ್ಮ ಪಂಚಾಯತಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ತೆಲುಗಿನ ಪ್ರಮುಖ ಆಂಕರ್ ಸುಮಾ ಕನಕಾಲ ಸಾಕಷ್ಟು ಸಮಯದ ಬಳಿಕ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಜಯ್ ಕಲಿವರಪು ನಿರ್ದೇಶನದ ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕಿರಣವಾಣಿ ಅವರ ಸಂಗೀತವಿದೆ. ಚಿತ್ರವು ಮೇ 19 ರಂದು ಬಿಡುಗಡೆಯಾಗಲಿದೆ.
ಈ ಸಂದರ್ಭದಲ್ಲಿ, ಪ್ರಚಾರದ ಭಾಗವಾಗಿ ಸುಮಾ ಸರಣಿ ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಒಂದು ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿಚ್ಛೇದನದ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುಮಾ ಅವರು, ನಾನು ರಾಜೀವ್ ಅವರನ್ನು ಮದುವೆಯಾಗಿ 23 ವರ್ಷಗಳು ಕಳೆದಿವೆ. ಈ 23 ವರ್ಷಗಳಲ್ಲಿ ನಾವು ತುಂಬಾ ಸಂತೋಷವಾಗಿದ್ದೇವೆ.
ಈ ರೀತಿಯ ವದಂತಿಗಳು ಬಂದಾಗಲೆಲ್ಲಾ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಾರೆ.
ಇದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಇಂಡಸ್ಟ್ರಿಯಲ್ಲಿ ಈ ರೀತಿಯ ವದಂತಿಗಳು ಸಾಮಾನ್ಯ. ಸೆಲೆಬ್ರಿಟಿಗಳು ಅಂದ್ಮೇಲೆ ಇಂತಹ ವದಂತಿಗಳು ಬರುತ್ತಲೇ ಇರುತ್ತವೆ. ಇದರಿಂದ ಮಾನಸಿಕವಾಗಿ ನೊಂದಿದ್ದರೂ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ ಎಂದಿದ್ದಾರೆ.