ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಜಾಗತಿಕವಾಗಿ ನೆಟ್ಫ್ಲಿಕ್ಸ್ನಲ್ಲಿ ನಂಬರ್ 1 ಇಂಗ್ಲಿಷೇತ್ತರ ಸಿನಿಮಾವಾಗಿ ಹೊರಹಹೊಮ್ಮಿದೆ..
ಗಂಗೂಬಾಯಿ ಕಥಿಯಾವಾಡಿ ನೆಟ್ಫ್ಲಿಕ್ಸ್ ಮೂಲಕ ವಿಶ್ವಾದ್ಯಂತ ಜನರನ್ನ ತಲುಪಿದೆ… ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮತ್ತು ಆಲಿಯಾ ಭಟ್ ನಟಿಸಿರುವ ಈ ಸಿನಿಮಾ 2022ರ ಏಪ್ರಿಲ್ 26 ರಿಂದ NETFLIX ನಲ್ಲಿಸ್ಟ್ರೀಮಿಂಗ್ ಆಗುತ್ತಿದೆ..
ಶಕ್ತಿಶಾಲಿ ಕಥಾಹಂದರ, ನೈಜ ಕಥೆ, ಮಹಿಳಾ ಪ್ರಧಾನ ಸಿನಿಮಾದ ಗಂಗೂಭಾಯಿ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷೆ ಮಟ್ಟದ ಕಮಾಲ್ ಮಾಡಲಿಲ್ಲ.. ಆದ್ರೂ ಬಹುತೇಕರು ಸಿನಿಮಾ ಮೆಚ್ಚಿದರು.. ಆದ್ರೆ ಹಾಕಿದ ಬಂಡವಾಳ ಬಾಕ್ಸ್ ಆಫೀಸ್ ನಲ್ಲಿ ಬರಲಿಲ್ಲ ಎನ್ನಲಾಗುತ್ತೆ..
ಗಂಗೂಬಾಯಿ ಕಥಿಯಾವಾಡಿ ಜಾಗತಿಕವಾಗಿ ನೆಟ್ಫ್ಲಿಕ್ಸ್ನಲ್ಲಿ #1 ಇಂಗ್ಲಿಷ್ ಅಲ್ಲದ ಚಲನಚಿತ್ರವಾಗಿದೆ. ಸಿನಿಮಾವನ್ನ 13.81 ಮಿಲಿಯನ್ ಗಂಟೆಗಳ ಕಾಲ ವೀಕ್ಷಿಸಲಾಗಿದೆ ಮತ್ತು ಕೆನಡಾ, ಯುನೈಟೆಡ್ ಕಿಂಗ್ಡಮ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಎಇ ಸೇರಿದಂತೆ ವಿಶ್ವದ 25 ದೇಶಗಳಲ್ಲಿ ಟಾಪ್ 10 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ.
gangubhai kathiyavadi trending no.1 in NETFLIX