ಕಳೆದ ವರ್ಷ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಸೂರ್ಯ ಅವರ ಜೈ ಭೀಮ್ ಸಿನಿಮಾ , ಸಖತ್ ಹಿಟ್ ಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. ಸಾಕಷ್ಟು ವಿವಾದ ವಿರೋಧಗಳ ನಡುವೆಯೂ ಸೂಪರ್ ಹಿಟ್ ಆಗಿ ಪ್ರೇಕ್ಷರನ್ನ ಅದ್ರಲ್ಲೂ ಯುವ ಜನರನ್ನ ಪ್ರೇರೇಪಿಸುವಲ್ಲಿ ಯಸಸ್ವಿಯಾಯ್ತು.. ಸತ್ಯ ಘಟನೆಯ ಆಧಾರಿತ ಸಿನಿಮಾಗೆ IMDB 9.5 ರೇಟಿಂಗ್ ಕೂಡ ನೀಡಿತ್ತು.. ಈ ಮೂಲಕ ಸಿನಿಮಾ ಹಾಲಿವುಡ್ ಸಿನಿಮಾಗಳನ್ನ ಮೀರಿ ಯಶಸ್ಸು ಸಾಧಿಸಿತ್ತು..
ಜೈ ಭೀಮ್ – IMDb Rating – 9.5
ಈ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು.. ದೇಶಾದ್ಯಂತ ಮೆಚ್ಚುಗೆ ಗಳಿಸಿದ ತಮಿಳು ನಟ ಸೂರ್ಯ ನಟನೆಯ ಈ ಸಿನಿಮಾಗೆ ಆಗ ಅಷ್ಟೇ ವಿರೋಧವೂ ವ್ಯಕ್ತವಾಗಿತ್ತು.. ಕೆಲವರು ವಿರೋಧ ವ್ಯಲ್ತಪಡಿಸಿದ್ದರು..
ಆದ್ರೀಗ ‘ಜೈ ಭೀಮ್’ ಸಿನಿಮಾ ತಂಡಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರತಂಡದ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಚೆನ್ನೈ ಕೋರ್ಟ್ ಪೊಲೀಸ್ ರಿಗೆ ಆದೇಶಿಸಿದೆ.
ಜೈ ಭೀಮ್ ಸಿನಿಮಾದಲ್ಲಿ ವನ್ನಿಯಾರ್ ಸಮುದಾಯದ ಜನರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ‘ರುದ್ರ ವನ್ನಿಯಾರ್ ಸೇನಾ’ ಸಂಘಟನೆಯು ಈ ಹಿಂದೆ ಕೇಸ್ ದಾಖಲಿಸಿತ್ತು.
ನಿರ್ದೇಶಕ ಜ್ಞಾನವೇಲ್, ನಿರ್ಮಾಪಕಿ ಜ್ಯೋತಿಕಾ ಮತ್ತು ನಟ ಸೂರ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಹೇಳಲಾಗಿತ್ತು. ಆದರೆ, ಪೊಲೀಸ್ ರು ಎಫ್.ಐ.ಆರ್ ದಾಖಲಿಸಿರಲಿಲ್ಲ.
ಬುಡಕಟ್ಟು ಸಮುದಾಯದ ಮೇಲೆ ಪೊಲೀಸ್ ದೌರ್ಜನ್ಯ ದೃಶ್ಯಗಳಲ್ಲಿ ವನ್ನಿಯಾರ್ ಸಮುದಾಯವನ್ನು ಅವಹೇಳನಕಾರಿಯಂತೆ ಚಿತ್ರಿಸಲಾಗಿದೆ. ಅದರಿಂದ ಆ ಸಮುದಾಯದವರಿಗೆ ತುಂಬಾ ನೋವಾಗಿದೆ ಎಂದು ದೂರದಾರರು ಆರೋಪಿಸಿದ್ದರು.
ಏ.29 ರಂದು ಈ ಪ್ರಕರಣವನ್ನು ವಿಚಾರಣೆಗೆ ತಗೆದುಕೊಂಡಿದ್ದ ನ್ಯಾಯಾಧೀಶರು ‘ನಟ, ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಎಫ್.ಐ.ಆರ್ ದಾಖಲಿಸಿ, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ.20ರಂದು ನಡೆಯಲಿದೆ.
Jai Bhim – court orders to File FIR against film team