ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ ಆತ್ಮಹತ್ಯಗೆ ಶರಣಾಗಿದ್ದಾರೆ. ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಸೀಸನ್ ನಲ್ಲಿ ಇವರು ಭಾಗಿಯಾಗಿದ್ದರು.. ನಂತರ ಟಿಕ್ ಟಾಕ್ ಮೂಲಕ ಹೆಚ್ಚು ಫೇಮಸ್ ಆಗಿದ್ದ 27 ವರ್ಷದ ತಿಮ್ಮಣ್ಣ ವೃತ್ತಿಪರ ಲೈನ್ ಮನ್ ಆಗಿದ್ದರು..
ಆದ್ರೆ ವಿಪರ್ಯಾಸವೆಂದರೆ ಇಂದು ಅವರ ಹೊಸ ಮನೆ ಗೃಹಪ್ರವೇಶವಿತ್ತು. ಅತಿಥಿಗಳು ಸ್ನೇಹಿತರಿಗೆಲ್ಲಾ ಆಮಂತ್ರವಣ್ಣೂ ನೀಡಿದ್ದರಂತೆ.. ಆದ್ರೆ ಇಷ್ಟೆಲ್ಲಾ ನಡುವೆ ಗೃಹ ಪ್ರವೇಶಕ್ಕೆ ಎರೆಡು ದಿನದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು ತಿಮ್ಮಣ್ಣನ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ಧಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ.. ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಅನುಮಾನ ವ್ಯಕ್ತಪಡಿಸಿಲಾಗಿದೆ.
ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ… ಇವರು ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು.