ಬಾಕ್ಸ್ ಆಫೀಸ್ ಆಲ್ ಟೈಮ್ ಕಲೆಕ್ಷನ್ ನಲ್ಲಿ ಟಾಪ್ 2 ಹಿಂದಿ ಸಿನಿಮಾಗಳು – KGF 2 , ಬಾಹುಬಲಿ 2
ಹಿಂದಿ ಸಿನಿಮಾಗಳಿಗೆ ಪ್ರಸ್ತುತ ಸೌತ್ ಸಿನಿಮಾಗಳು ದುಸ್ವಪ್ನದಂತೆ ಕಾಡುತ್ತಿವೆ.. ಹಿಂದೆ ಸೌತ್ ಸಿನಿಮಾಗಳಂದ್ರೆ ಕೇವಲವಾಗಿ ನೋಡ್ತಿದ್ದವರಿಗೆ ಈಗ ಇಂಡಿಯಾದ ಟಾಪ್ 10 ಸಿನಿಮಾಗಳಲ್ಲಿ ಹೆಸರುಳಿಸಿಕೊಳ್ಳಲೂ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ..
ಗಂಗೂಭಾಯಿ ಕಾಥೇಯವಾಡಿ ಇಂದ ಹಿಡಿದು , 83 , ಬಚ್ಚನ್ ಪಾಂಡೆ, ಜೆರ್ಸಿ , ಹೀರೋಪಂತಿ 2 , ರನ್ ವೇ 34 ಹೀಗೆ ಬ್ಯಾಕ್ ಟು ಬ್ಯಾಕ್ ಬರೀ ಫ್ಲಾಪ್ ಸಿನಿಮಾಗಳೇ ಬಾಲಿವುಡ್ ಕೊಡುಗೆ.. ಆದ್ರೆ ಬಾಕ್ಸ್ ಆಫೀಸ್ ನ ಆಳುತ್ತಿರೋರು ಈಗ ಸೌತ್ ಸಿನಿಮಾಗಳು.. ಬಾಹುಬಲಿ 2 , ರೋಬೋ 2 , ಪುಷ್ಪ , RRR ಈಗ KGF 2 ಬಾಲಿವುಡ್ ನ ಭದ್ರ ಬುನಾದಿಯನ್ನ ಅಲುಗಾಡಿಸಿವೆ..
ಇದೀಗ ಹಿಂದಿಯಲ್ಲಿ ಅಮಿರ್ ಖಾನ್ ಜೀವಿತಾವಧಿಯ ರೆಕಾರ್ಡ್ ಬ್ರೇಕ್ ಮಾಡಿರುವ ರಾಕಿ ಭಾಯ್ ಬಾಕ್ಸ್ ಆಫೀಸ್ ಹೊಸ ಸುಲ್ತಾನನಾಗಿ ಹೊರಹೊಮ್ಮಿದ್ದಾರೆ..
KGF 2 : ಇಂಡಿಯನ್ ಬಾಕ್ಸ್ ಆಫೀಸ್ ಗೆ ‘ರಾಕಿ ಭಾಯ್’ CEO – ದಂಗಲ್ ರೆಕಾರ್ಡ್ ಬ್ರೇಕ್
1000 ಕೋಟಿ ಕ್ಲಬ್ದ ಸೇರಿರುವ ಸಿನಿಮಾ ಹಿಂದಿ ಆವೃತ್ತಿಯಲ್ಲಿ 390 ಕೋಟಿ ರೂ ಮೇಲೆ ಕಲೆಕ್ಷನ್ ಮಾಡಿ ಅಮಿರ್ ಖಾನ್ ದಂಗಲ್ ರೆಕಾರ್ಡ್ ಬೀಟ್ ಮಾಡಿದೆ..
ಆದ್ರೆ ಹಿಂದಿ ಬೆಲ್ಟ್ನಲ್ಲಿನ ಕಲೆಕ್ಷನ್ ಗಳಿಗೆ ಸಂಬಂಧಿಸಿದಂತೆ ಕೆಜಿಎಫ್ 2 ದಂಗಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಅಮೀರ್ ಖಾನ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರತೀಯ ಚಲನಚಿತ್ರಗಳ ವಿಶ್ವಾದ್ಯಂತ ಕಲೆಕ್ಷನ್ಗಳ ಪಟ್ಟಿಯಲ್ಲಿ ಇನ್ನೂ ಅಗ್ರಸ್ಥಾನದಲ್ಲಿದೆ..

ದಂಗಲ್ನ ವಿಶ್ವಾದ್ಯಂತ ಗಳಿಕೆಯು 2024 ಕೋಟಿ ರೂಪಾಯಿಗಳು, ಬಾಹುಬಲಿ ಕಲೆಕ್ಷನ್ 2 ನ 1,810 ಕೋಟಿ ರೂ.. ನಂತರ ಮೂರನೇ ಸ್ಥಾನದಲ್ಲಿ ಕೆಜಿಎಫ್ 2 ಇದೆ.. 1,056 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದೆ..
ಆದ್ರೆ ನಾವಿಲ್ಲೊಂದು ವಿಚಾರ ಗಮನಿಸಬೇಕು ಡೊಮೆಸ್ಟಿಕ್ ಬಾಕ್ಸ್ ಆಫೀಸ್ ನಲ್ಲಿ ದಂಗಲ್ ಕಲೆಕ್ಷನ್ ಕೇವಲ 387 ಕೋಟಿ ಮಿಕ್ಕ ಕಲೆಕ್ಷನ್ ಬಂದಿರೋದೆಲ್ಲಾ ವಿಶ್ವದಿಂದ.. ಆದ್ರೆ ಬಾಹುಬಲಿ 2 , KGF 2 ಹಾಗಲ್ಲ ಕೇವಲ ಹಿಂದಿಯಲ್ಲೇ ಸುಮಾರು 400 ಕೋಟಿ , 500 ಕೋಟಿ ಕಲೆಕ್ಷನ್ ಮಾಡಿದ್ದು ಬಾಲಿವುಡ್ ಅವಮಾನವೇ.. ಬೇರೆ ಭಾಷೆಗಳಲ್ಲಿ ಎರೆಡೂ ಸಿನಿಮಾಗಳ ಆರ್ಭಟ ಜೋರಿದೆ..
ಅದ್ರಲ್ಲೂ ವಿದೇಶಿ ಕಲೆಕ್ಷನ್ ನೋಡಿದ್ರೆ ಬಹುದೊಡ್ಡ ಮಾರ್ಕೆಟ್ ಅಂದ್ರೆ ಚೀನೀ ಮಾರ್ಕೆಟ್.. ದಂಗಲ್ ಚೀನೀ ಮಾರ್ಕೆಟ್ ನ ಎಫೆಕ್ಟ್ ನಿಂದ ಅಷ್ಟು ದುಡ್ಡು ಗಳಿಸಿತ್ತು.. ಆದ್ರೆ KGF 2 ಗೆ ಚೀನಾದಲ್ಲಿ ಇನ್ನೂ ರಿಲೀಸ್ ಆಗಿಲ್ಲ.. ಆದ್ರೆ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ ಸಿನಿಮಾವನ್ನ ಅಲ್ಲೂ ರಿಲೀಸ್ ಮಾಡುವ ಪ್ಲಾನ್ ನಲ್ಲಿದೆ ಸಿನಿಮಾ ತಂಡವೆನ್ನಲಾಗಿದೆ..
KGF 2 , bahubali 2 are the top hindi films