KGF 2 …. KGF2…KGF 2 …..
ಕರ್ನಾಟಕ , ತಮಿಳುನಾಡು , ಕೇರಳ ಅಷ್ಟೇ ಯಾಕೆ ಇಡೀ ಇಂಡಿಯಾದಲ್ಲಿ ಸದ್ಯಕ್ಕೆ KGF 2… KGF 2… KGF2 ಹವಾ ಎದ್ದಿದೆ… ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಡಾಮಿನೇಷನ್ ಗೆ ಬಾಲಿವುಡ್ ಸಿನಿಮಾಗಳು ಶೇಕ್ ಆಗಿವೆ.. ಬಾಲಿವುಡ್ ನ ಕೆಲ ಸೋ ಕಾಲ್ಡ್ ಸ್ಟಾರ್ ಗಳಿಗೆ ಕನ್ನಡ ಸಿನಿಮಾ ಮೇಲೆ ಉರಿ ಶುರುವಾಗಿದೆ..
ಆದ್ರೂ ರಾಕಿ ಭಾಯ್ ಸ್ಟೈಲ್ ಅಲ್ಲೇ ಡೈಲಾಗ್ ಹೊಡೆಯೋದಾದ್ರೆ…
ಹೇಟರ್ಸ್…. ಹೇಟರ್ಸ್… ಹೇಟರ್ಸ್…. ಐ ಡೋಂಟ್ ಲೈಕ್ ಹೇಟರ್ಸ್… ಐ ಅವಾಯ್ಡ್… ಬಟ್ ಹೇಟರ್ಸ್ ಲೈಕ್ಸ್ ಐ ಕಾಂಟ್ ಅವಾಯ್ಡ್…….. ಸೋ ಐ ಡಾಮಿನೇಟ್..
ಹಂಗೇ ಆಗಿರೋದು ಕೂಡ… KGF 2 ನ ಸಕ್ಸಸ್ ನೋಡಿ ಉರಿದುಕೊಂಡವರಿಗೆ ಇನ್ನೂ ಉರಿಸಿದೆ ಸಿನಿಮಾ ಬಾಲಿವುಡ್ ನ ದಂಗಲ್ ಸಿನಿಮಾದ ರೆಕಾರ್ಡ್ ಮುರಿಯೋ ಮೂಲಕ..
ದಂಗಲ್ ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿರುವ ಕನ್ನಡದ KGF 2 ಈಗ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾವಾಗಿದೆ… ವಿಚಿತ್ರ , ಆಶ್ವರ್ಯ , ಹೆಮ್ಮೆ ಅಂದ್ರೆ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಟಾಪ್ 2 ನಲ್ಲಿರೋ ಎರೆಡೂ ಸಿನಿಮಾಗಳು ನಮ್ಮ ಸೌತ್ ಸಿನಿಮಾಗಳೇ … ಮೊದಲ ಸ್ಥಾನದಲ್ಲಿ ಬಾಹುಬಲಿ 2 , ಎರಡನೇ ಸ್ಥಾನದಲ್ಲಿ ನಮ್ಮ ಹೆಮ್ಮೆಯ ಕನ್ನಡದ ಸಿನಿಮಾ KGF 2..
ಅಷ್ಟೇ ಅಲ್ಲ… ಟಾಪ್ 6 ನಲ್ಲಿರೋದು 4ನೇ ಸ್ಥಾನದಲ್ಲಿರೋ ದಂಗಲ್ ಬಿಟ್ಟು ಉಳಿಕಿವೆಲ್ಲಾ ಸೌತ್ ಸಿನಿಮಾಗಳೇ..
KGF 2 ಸದ್ಯಕ್ಕೆ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡ್ತಿದೆ.. ಜೆರ್ಸಿ ರಿಲೀಸ್ ಆಗಿತ್ತಾ ಅನ್ನೋದು ಮರೆತೇ ಹೋಗಿದೆ.. ಹೀರೋಪಂತಿ 2 , ರನ್ ವೇ 34 ಬಾಕ್ಸ್ ಆಫೀಸ್ ನಲ್ಲಿ ಉಸಿರಾಡಡಲು ಪ್ರಯಾಸ ಪಡ್ತಿವೆ..
ಪ್ರಭಾಸ್ ಅಭಿನಯದ ಬಾಹುಬಲಿ 2 ಹಿಂದಿಯಲ್ಲಿ 510.99 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, ದಂಗಲ್ 387.38 ಕೋಟಿ ರೂಪಾಯಿಗಳನ್ನು ಗಳಿಸಿತ್ತು… ಇದೀಗ ದಂಗಲ್ ರೆಕಾರ್ಡ್ ಚಿಂದಿ ಚಿತ್ರಾನ್ನ ಬೂಂದಿ ಮೊಸ್ರಾನ್ನವಾಗಿದೆ..
ಅಂದ್ಹಾಗೆ ಅಮೀರ್ ಖಾನ್ ದಂಗಲ್ ಸಿನಿಮಾದ ಒಟ್ಟಾರೆ ರೆಕಾರ್ಡ್ ಈಗ ಛಿದ್ರಛಿದ್ರವಾಗಿದೆ.. 387.38 ಕೋಟಿ ಸಂಗ್ರವನ್ನ ಹಿಂದಿ ಆವೃತ್ತಿಯಲ್ಲಿ KGF 2 ಮೀರಿಸಿದೆ..