ಭಾರತದಲ್ಲಿ ಸರ್ವಂ KGF ಕೆಜಿಎಫ್ ಮಯಂ… ಎಂಬಂತಗಾಗಿದೆ.
ಬಾಕ್ಸ್ ಆಫೀಸ್ ಆಲ್ ಟೈಮ್ ಕಲೆಕ್ಷನ್ ನಲ್ಲಿ ಟಾಪ್ 2 ಹಿಂದಿ ಸಿನಿಮಾಗಳು – KGF 2 , ಬಾಹುಬಲಿ 2
ಹಿಂದಿ ಸಿನಿಮಾಗಳಿಗೆ ಪ್ರಸ್ತುತ ಸೌತ್ ಸಿನಿಮಾಗಳು ದುಸ್ವಪ್ನದಂತೆ ಕಾಡುತ್ತಿವೆ.. ಹಿಂದೆ ಸೌತ್ ಸಿನಿಮಾಗಳಂದ್ರೆ ಕೇವಲವಾಗಿ ನೋಡ್ತಿದ್ದವರಿಗೆ ಈಗ ಇಂಡಿಯಾದ ಟಾಪ್ 10 ಸಿನಿಮಾಗಳಲ್ಲಿ ಹೆಸರುಳಿಸಿಕೊಳ್ಳಲೂ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ..
ಕನ್ನಡ ಅಭಿಮಾನಿಗಳಷ್ಟೇ ಅಲ್ಲ ಇಡೀ ದೇಶಾದ್ಯಂತ ರಾಕಿ ಭಾಯ್ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಎಲ್ಲಿ ನೋಡಿದ್ರೂ ರಾಕಿ ಹವಾ ಜೋರಾಗಿದೆ.. ಇದೀಗ ಯಶ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಫಾಲೋವರ್ ಗಳ ಸಂಖ್ಯೆ 9 ಮಿಲಿಯನ್ ಆಗಿದೆ..
ಇದರೊಂದಿಗೆ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸ್ಯಾಂಡಲ್ ವುಡ್ ನಟರಲ್ಲಿ ಯಶ್ ಅಗ್ರಸ್ಥಾನದಲ್ಲಿದ್ದಾರೆ.. ನಂತರ ಲಿಸ್ಟ್ನಲ್ಲಿ ನಟ ಸುದೀಪ್ , ದರ್ಶನ್ ಇದ್ದಾರೆ.
ಗಂಗೂಭಾಯಿ ಕಾಥೇಯವಾಡಿ ಇಂದ ಹಿಡಿದು , 83 , ಬಚ್ಚನ್ ಪಾಂಡೆ, ಜೆರ್ಸಿ , ಹೀರೋಪಂತಿ 2 , ರನ್ ವೇ 34 ಹೀಗೆ ಬ್ಯಾಕ್ ಟು ಬ್ಯಾಕ್ ಬರೀ ಫ್ಲಾಪ್ ಸಿನಿಮಾಗಳೇ ಬಾಲಿವುಡ್ ಕೊಡುಗೆ.. ಆದ್ರೆ ಬಾಕ್ಸ್ ಆಫೀಸ್ ನ ಆಳುತ್ತಿರೋರು ಈಗ ಸೌತ್ ಸಿನಿಮಾಗಳು.. ಬಾಹುಬಲಿ 2 , ರೋಬೋ 2 , ಪುಷ್ಪ , RRR ಈಗ KGF 2 ಬಾಲಿವುಡ್ ನ ಭದ್ರ ಬುನಾದಿಯನ್ನ ಅಲುಗಾಡಿಸಿವೆ..
ಇದೀಗ ಹಿಂದಿಯಲ್ಲಿ ಅಮಿರ್ ಖಾನ್ ಜೀವಿತಾವಧಿಯ ರೆಕಾರ್ಡ್ ಬ್ರೇಕ್ ಮಾಡಿರುವ ರಾಕಿ ಭಾಯ್ ಬಾಕ್ಸ್ ಆಫೀಸ್ ಹೊಸ ಸುಲ್ತಾನನಾಗಿ ಹೊರಹೊಮ್ಮಿದ್ದಾರೆ..
1000 ಕೋಟಿ ಕ್ಲಬ್ದ ಸೇರಿರುವ ಸಿನಿಮಾ ಹಿಂದಿ ಆವೃತ್ತಿಯಲ್ಲಿ 390 ಕೋಟಿ ರೂ ಮೇಲೆ ಕಲೆಕ್ಷನ್ ಮಾಡಿ ಅಮಿರ್ ಖಾನ್ ದಂಗಲ್ ರೆಕಾರ್ಡ್ ಬೀಟ್ ಮಾಡಿದೆ..
ಆದ್ರೆ ಹಿಂದಿ ಬೆಲ್ಟ್ನಲ್ಲಿನ ಕಲೆಕ್ಷನ್ ಗಳಿಗೆ ಸಂಬಂಧಿಸಿದಂತೆ ಕೆಜಿಎಫ್ 2 ದಂಗಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಅಮೀರ್ ಖಾನ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರತೀಯ ಚಲನಚಿತ್ರಗಳ ವಿಶ್ವಾದ್ಯಂತ ಕಲೆಕ್ಷನ್ಗಳ ಪಟ್ಟಿಯಲ್ಲಿ ಇನ್ನೂ ಅಗ್ರಸ್ಥಾನದಲ್ಲಿದೆ..
ಇತ್ತೀಚೆಗೆ ಬಾಲಿವುಡ್ ನ ಸೂಪರ್ ಸ್ಟಾರ್ ಗಳು ಗುಟ್ಕಾ ಪಾನ್ ಮಸಾಲಾ ಜಾಹೀರಾತುಗಳನ್ನ ಒಪ್ಪಿ ದುಡ್ಡು ಮಾಡುತ್ತಾ ಗುಟ್ಕಾ ಗ್ಯಾಂಗ್ ಎಂದು ಟ್ರೋಲ್ ಆಗ್ತಾ ವರ್ಚಸ್ಸು ಕಳೆದುಕೊಂಡಿದ್ದಾರೆ.. ಈ ಮೂಲಕ ಯುವ ಪೀಳಿಗೆಯ ದಿಕ್ಕು ತಪ್ಪಿಸಿ ತಾವು ಕೇವಲ ರೀಲ್ ಹೀರೋಗಳು ಅನ್ನೋದನ್ನ ಸಾಬೀತುಪಡಿಸಿದ್ಧಾರೆ..
ಅದೇ ಮತ್ತೊಂದ್ಕಡೆ ಹಿಂದಿಯಲ್ಲಿ ಸ್ಟಾರ್ ಡಮ್ ಇಲ್ಲದೇ ರಿಲೀಸ್ ಆಗಿ ತೂಫಾನ್ ಎಬ್ಬಿಸಿ ದೊಡ್ಡ ಅಭಿಮಾನಿಗಳನ್ನ ಇಡೀ ದೇಶಾದ್ಯಂತ ಸಂಪಾದನೆ ಮಾಡಿರುವ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಅವರು ರಿಯಲ್ ನಲ್ಲೂ ಹೀರೋ ಅನ್ನೋದನ್ನ ಪ್ರೂವ್ ಮಾಡಿದ್ಧಾರೆ..
ಯಶ್ ಅವರು ತಮಗೆ ಸಿಕ್ಕಿದ್ದ ಕೋಟ್ಯಾಂತರ ರೂಪಾಯಿಯ ಪಾನ್ ಮಸಾಲಾ ಜಾಹೀರಾತಿನ ಆಫರ್ ಅನ್ನ ತಿರಸ್ಕರಿಸಿದ್ಧಾರೆ ವಿತ್ ಸ್ಟೈಲ್.. ಪಾನ್ ಮಸಾಲಾ ಜಾಹೀರಾತಿಗಾಗಿ ಅಕ್ಷಯ್ ಕುಮಾರ್ ಕ್ಷಮೆಯಾಚಿಸಿದ ಕೆಲವು ದಿನಗಳ ನಂತರ, ಕನ್ನಡದ ಸೂಪರ್ ಸ್ಟಾರ್ ಯಶ್ ಇದೇ ರೀತಿಯ ಜಾಹೀರಾತು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.
ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್ ನ ಬಿಗ್ ಆಫರ್ನ್ನ ಯಶ್ ತಿರಸ್ಕರಿಸಿದ್ದಾರೆ. ದೇಶದ ಪ್ರತಿಷ್ಠಿತ ಸಂಸ್ಥೆಯೊಂದು ಯಶ್ ಅವರನ್ನ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್ ನ ರಾಯಭಾರಿಯಾಗಿ ಪ್ರಮೋಟ್ ಮಾಡಲು ಅಪ್ರೋಚ್ ಮಾಡಲಾಗಿತ್ತು. ಆದರೆ ಈ ಜಾಹೀರಾತನ್ನ ಮಾಡುವುದರಿಂದ ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನ ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಾಂತರ ಮೌಲ್ಯದ ಆಫರ್ ನ್ನೇ ಯಶ್ ಕೈ ಬಿಟ್ಟಿದ್ದಾರೆ. ೀ ಮೂಲಕ ಮತ್ತೆ ಅಭಿಮಾನಿಗಳ ಮನ ಗೆದ್ದಿದ್ದಾರೆ..
ಯಶ್ ಅಭಿಮಾನಿಗಳು ಯಶ್ ನಿರ್ಧಾರಕ್ಕೆ ಫುಲ್ ಖುಷ್ ಆಗಿದ್ದಾರೆ.. ಮತ್ತೊಂದೆಡೆ ಯಶ್ ಅವರ ಜೊತೆಗೆ ಅಜಯ್ ದೇವಗನ್ , ಶಾರೂಖ್ ಖಾನ್ , ಅಕ್ಷಯ್ ಕುಮಾರ್ ರನ್ನ ಕಂಪೇರ್ ಮಾಡುತ್ತಾ ಆ ಸ್ಟಾರ್ ಗಳನ್ನ ಗುಟ್ಕಾ ಗ್ಯಾಂಗ್ ಎಂದು ಟ್ರೋಲ್ ಮಾಡಲಾಗ್ತಿದೆ.. ಯಶ್ ಅವರನ್ನ ಹಾಡಿ ಹೊಗಳುತ್ತಾ ಮಾದರಿಯಾಗಿ ಸ್ವೀಕರಿಸಿ ಎಂದು ಪಾಠ ಮಾಡಲಾಗ್ತಿದೆ..