ವಿಜಯ್ ದೇವರಕೊಂಡ ಅಭಿನಯದ ಚಿತ್ರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಅಲ್ಲ ಇಂಡಿಯನ್ ಸಿನಿಮಾ ಲೈಗರ್ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.. ಈ ಸಿನಿಮಾಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ.. ಸಿನಿಮಾತಂಡ ಪ್ರಚಾರದಲ್ಲಿ ತೊಡಗಿದೆ..
ಈ ನಡುವೆ ಚಿತ್ರದ ಆಡಿಯೋ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ.. ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಅವರು ಸಿನಿಮಾದಲ್ಲಿ MME ಬಾಕ್ಸರ್ ಪಾತ್ರಕ್ಕಾಗಿ ಅತ್ಯುತ್ತಮವಾಗಿ ಹೊಂದಿಕೊಳ್ಳಲು ಥೈಲ್ಯಾಂಡ್ನಲ್ಲಿ ತೀವ್ರವಾದ ತರಬೇತಿಯನ್ನು ಪಡೆದಿದ್ದರೆಂಬ ಮಾಹಿತಿಯೂ ಇದೆ..
ವಿಜಯ್ ದೇವರ್ ಕೊಂಡ ಅವರ ಮುಂಬರುವ ಚಿತ್ರ ಲೈಗರ್ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಸುದ್ದಿಯಾಗುತ್ತಲೇ ಇದೆ. ಆರ್ಆರ್ಆರ್, ಪುಷ್ಪ ಮತ್ತು ಕೆಜಿಎಫ್ನ ಟ್ರೆಂಡ್ ಅನ್ನು ಅನುಸರಿಸಿ, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಾರಣ ಸಖತ್ ಕ್ರೇಜ್ ಇದೆ..
ಮೂಲಗಳ ಪ್ರಕಾರ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಸೋನಿ ಮ್ಯೂಸಿಕ್ ಇಂಡಿಯಾ 16 ಕೋಟಿ ರೂ.ಗಳಿಗೆ ಪಡೆದುಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಯುವ ನಟನ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತ ಸಿಕ್ಕಿಲ್ಲ ಎನ್ನಲಾಗಿದೆ..