ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಟಾಪ್ 10 ಟಾಲಿವುಡ್ ನಟಿಯರ ಪೈಕಿ ಅಗ್ರಸ್ಥಾನದಲ್ಲಿರೋ ನಟಿ.. ಆಧ್ರೆ ಅದ್ಯಾಕೋ ಪೂಜಾ ಹೆಗ್ಡೆ ನಸೀಬ್ ಸರಿ ಇಲ್ಲ ಎನ್ನುಸ್ತಿದೆ..
ಅಂದ್ಹಾಗೆ ಉಡುಪಿ ಮೂಲದವರೇ ಆದ ನಟಿ ಪೂಜಾ ಹೆಗ್ಡೆ ಮಂಗಳವಾರ ಉಡುಪಿಯ ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರದಂದು ಶುಭದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಪೂಜೆಯಲ್ಲಿ ತಮ್ಮ ಕುಟುಂಬದವರೊಂದಿಗೆ ನಟಿ ಪೂಜಾ ಹೆಗ್ಡೆ ಭಾಗಿಯಾಗಿದ್ದರು.
ಕುಟುಂಬದ ಸದಸ್ಯರೊಂದಿಗೆ ಕುಟುಂಬದ ಆವರಣದಲ್ಲಿ ಕೆಲ ಕಾಲ ಕಳೆದರು. ಭೇಟಿಯ ವೇಳೆ ಸ್ಥಳೀಯರೊಂದಿಗೆ ಪೂಜಾ ತುಳು ಭಾಷೆನಲ್ಲೇ ಮಾತಾಡಿದರು. ಪ್ರಸ್ತುತ ಟಾಲಿವುಡ್ ನ ಕ್ವೀನ್ ಆಗಿರುವ ಪೂಜಾ ಹೆಗ್ಡೆ ಅತಿ ಹೆಚ್ಚು ಸಂಭಾವನೆ ಪಡೆಯುವ ಬಹುಬೇಡಿಕೆಯ ನಟಿಯಾಗಿದ್ದಾರೆ.. ಸ್ಟಾರ್ ಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಿರುವ ಬುಟ್ಟಬೊಮ್ಮನಿಗೆ ಫಾನ್ ಫಾಲೋವಿಂಗ್ ಕಡಿಮೆಯಿಲ್ಲ..
ಆದ್ರೆ ಅದ್ಯಾಕೋ ಇತ್ತೀಚೆಗೆ ಪೂಜಾ ಹೆಗ್ಡೆ ಸಿನಿಮಾಗಳು ಎಷ್ಟೇ ಸಾಲು ಸಾಲು ಸೋಲು ಕಾಣ್ತಿವೆ.. ರಾಧೆ ಶ್ಯಾಮ್ ಬಿಗ್ ಬಜೆಟ್ ಬುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ… ಬಾಹುಬಲಿ ಖ್ಯಾತಿಯ ಬಿಗ್ ಸ್ಟಾರ್ ಪ್ರಭಾಸ್ ಅವರ ನಟನೆಯ ಸಿನಿಮಾ.. ಕ್ರೇಜ್ ತುಂಬಾ ಇತ್ತಾದ್ರೂ ಫ್ಲಾಪ್ ಸಾಬೀತಾಯ್ತು…
ಅದಾದ ನಂತರ ಬಂದ ಬೀಸ್ಟ್ ಸಿನಿಮಾಗೂ ಕ್ರೇಜ್ ಏನೂ ಕಡಿಮೆ ಇರಲಿಲ್ಲ.. ದಳಪತಿ ವಿಜಯ್ ಅನ್ನೋ ಪವರ್ ಇತ್ತುಉ ಆ ಸಿನಿಮಾಗೆ.. ಭಾರೀ ನಿರೀಕ್ಷೆ ಇತ್ತು.. ಕ್ರೇಜ್ ಇತ್ತು…. ಬಿಗ್ ಬಜೆಟ್ ಸಿನಿಮಾವೇ ಆದ್ರೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಲಿಲ್ಲ..
ಅದಾದ ನಂತರ ಪೂಜಾ ಹೆಗ್ಡೆ ನಟನೆಯ ಆಚಾರ್ಯ ಸಿನಿಮಾ ಬಂತು.. ಈ ಸಿನಿಮಾದಲ್ಲಿ ಡಬಲ್ ಕ್ರೇಜ್ ಇತ್ತು.. ಚಿರಂಜೀವಿ , ರಾಮಚರಣ್ ಇಬ್ಬರನ್ನೂ ಒಟ್ಟಿಗೆ ಒಂದೇ ಸ್ಕ್ರೀನ್ ಮೇಲೆ ನೋಡುವ ಕುತೂಹಲ ಸಿನಿಮಾದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿತ್ತಾದ್ರೂ ಸಿನಿಮಾ ಅಂದುಕೊಂಡ ಮಟ್ಟಿಗೆ ಸೌಂಡ್ ಮಾಡ್ತಿಲ್ಲ..
ಹೀಗೆ ಸಾಲು ಸಾಲು ಸಿನಿಮಾಗಳಿಂದ ಸೋಲಾಗಿದೆ..
ಹೀಗಾಗಿ ಬುಟ್ಟಬೊಮ್ಮಗೆ ಅದೃಷ್ಟ ಕೈಕೊಟ್ಟಿದ್ಯಾ ಎನ್ನುವ ಮಾತುಗಳು ಆರಂಭವಾಗಿಬಿಟ್ಟಿದೆ… ಅಲಾ ವೈಕುಂಠಪುರಂ ಲೋ ಸಿನಿಮಾದ ಸಕ್ಸಸ್ ನ ನಂತರ ಬಹುತೇಕ ಪೂಜಾ ಹೆಗ್ಡೆಗೆ ಸಿಕ್ಕಿರೋದೆಲ್ಲಾ ಸೋಲೇ.. ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಗಳಿಸಿಲ್ಲ.. ಬಾಲಿವುಡ್ ಸಿನಿಮಾಗಳಲ್ಲೂ ಪೂಜಾಗೆ ಯಶಸ್ಸು ಸಿಕ್ಕಿಲ್ಲ..
ಆದ್ರೆ ಸಾಲು ಸಾಲು ಸೋಲುಗಳು ಪೂಜಾ ವರ್ಚಸ್ಸು ಕುಗ್ಗಿಸಿಲ್ಲ.. ಈಗಲೂ ನಟಿಗೆ ಬೇಡಿಕೆ ಕಡಿಮೆಯಾಗಿಲ್ಲ.. ಸಾಕಷ್ಟು ಆಫರ್ ಗಳು ಬರುತ್ತಲೇ ಇವೆ ಎಂದು ಇತ್ತೀಚೆಗೆ ಪೂಜಾ ಹೇಳಿಕೊಂಡಿದ್ಧಾರೆ..