KGF 2 …. KGF 2 ಹವಾ ತಗ್ಗೋ ಲಕ್ಷಣ ಕಾಣಿಸುತ್ತಿಲ್ಲ.. ಹಿಂದಿ ಬೆಲ್ಟ್ ನಲ್ಲಿ ಮಾತ್ರವೇ ಅಲ್ಲ ತಮಿಳು , ತೆಲುಗು , ಮಲಯಾಳಂನಲ್ಲೂ ಸಿನಿಮಾ ಕಮಾಲ್ ಮಾಡಿ ಹೊಸ ದಾಖಲೆ ಬರೆದಿದೆ.
ಅಂದ್ಹಾಗೆ ತಮಿಳಿನ ಡಬ್ಬಿಂಗ್ ವರ್ಷನ್ ಹೊಸ ದಾಖಲೆ ಬರೆದಿದೆ.. ಅಂದ್ರೆ ತಮಿಳುನಾಡಿನಲ್ಲಿ ರೂ 100 ಕೋಟಿ ಕಲೆಕ್ಷನ್ ಮಾಡಿದ ಮೊದಲ ಡಬ್ಬಿಂಗ್ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಸಿನಿಮಾ ಪಾತ್ರವಾಗಿರೋದು ಕನ್ನಡಿಗರಿಗೆ ಹೆಮ್ಮೆಯ ವಿಷಯ..
‘ಇಂಡಿಯನ್ ಸಿನಿಮಾ’ KGF 2 ತಮಿಳು ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರಿದ್ದು ತಮಿಳು ಸಿನಿಮಾ ಹೊರತಾಗಿ ಡಬ್ಬಿಂಗ್ ಸಿನಿಮಾವೊಂದು 100 ಕೋಟಿ ಕಲೆಕ್ಷನ್ ಮಾಡಿರುವುದು ಇದೇ ಮೊದಲ ಬಾರಿ.. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ರಾಕಿ ಭಾಯ್..
ಏಪ್ರಿಲ್ 14 ರಂದು ಪಂಚಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಯ್ತು.. ಈಗಾಗಲೇ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ತೂಫಾನ್ ಎಬ್ಬಿಸಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾವೆಂಬ ಹೆಗ್ಗಳಿಕೆಗೆ ಕನ್ನಡ ಸಿನಿಮಾ ಪಾತ್ರವಾಗಿದೆ..
ಪವರ್-ಪ್ಯಾಕ್ಡ್ ಆಕ್ಷನ್ ಡ್ರಾಮಾ ವಿಜಯ್ ಅವರ Beast ಸಿನಿಮಾದ ಜೊತೆಗೆ ಘರ್ಷಣೆಯಾದರೂ ಚಿತ್ರವು ತಮಿಳುನಾಡಿನಲ್ಲಿ ದೊಡ್ಡ ಪರದೆಯ ಮೇಲೆ ಅಬ್ಬರಿಸಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ..
ಈ ಮೂಲಕ ಮಾರ್ಚ್ನಲ್ಲಿ ಬಿಡುಗಡೆಯಾದ ‘RRR’ ರೆಕಾರ್ಡ್ ಈ ಹಿಂದೆ ರಿಲೀಸ್ ಆಗಿದ್ದ ಬಾಹುಬಲಿ 2 ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿ ಹಾಕಿದೆ..
ಅಷ್ಟೇ ಅಲ್ಲ ತಮಿಳುನಾಡಿನಲ್ಲಿ 2022 ರ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿರುವುದು ನಮ್ಮ KGF 2 ಎನ್ನುವುದು ಹೆಮ್ಮೆಯ ವಿಚಾರ.. ಅಜಿತ್ ಅವರ ‘ವಲಿಮೈ’, ಸೂರ್ಯ ಅವರ ‘ಎತರ್ಕ್ಕುಂ ತುನಿಂಧವನ್’ ಸೇರಿ ಅನೇಕ ತಮಿಳಿನ ಸಿನಿಮಾಗಳ ರೆಕಾರ್ಡ್ ಸಹ ಬ್ರೇಕ್ ಮಾಡಿದೆ..