KGF 2 : OTT ಯಲ್ಲಿ ತೂಫಾನಿ ದಾಖಲೆ : ಭಾರೀ ಮೊತ್ತಕ್ಕೆ ಸೇಲಾದ KGF 2
ಬಾಕ್ಸ್ ಆಫೀಸ್ ನಲ್ಲಿ KGF 2 ಡಾಮಿನೇಷನ್ ಮುಂದುವರೆದಿದೆ… ಹಿಂದಿ ಬೆಲ್ಟ್ ನಲ್ಲಿ ಸಿನಿಮಾ ತೂಫಾನ್ ಮುಂದುವರೆದಿದೆ. ಹಿಂದಿ ಆವೃತ್ತಿಯಲ್ಲಿ ಸಿನಿಮಾ ದಂಗಲ್ ನ ಜೀವಿತಾವಧಿಯ ರೆಕಾರ್ಡ್ ಅನ್ನ ಕೇವಲ 21 ದಿನಗಳಲ್ಲಿ ಬ್ರೇಕ್ ಮಾಡಿದ್ದೂ ಅಲ್ದೇ 400 ಕೋಟಿ ಕಲೆಕ್ಷನ್ ದಾಟಿದೆ..
ಪ್ರಭಾಸ್ ಅಭಿನಯದ ಬಾಹುಬಲಿ 2 ರ ನಂತರ ಭಾರತದಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ KGF 2.. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು 1,000 ಕೋಟಿ ಕ್ಲಬ್ಗೆ ಪ್ರವೇಶಿಸಿದ ಕರ್ನಾಟಕದ ಮೊದಲ ಚಿತ್ರವಾಗಿದೆ.
ಅತಿ ವೇಗವಾಗಿ 250 ಕೋಟಿ ಗಳಿಸಿದ ಹಿಂದಿ ಸಿನಿಮಾವಾಗಿದೆ.. ಭಾರತದಲ್ಲಿ ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ‘ಇಂಡಿಯನ್’ ಸಿನಿಮಾ …
ಇದೀಗ ಸಿನಿಮಾ ಒಟಿಟಿಯಲ್ಲೂ ಸುನಾಮಿ ಏಳಿಸೋದಕ್ಕೆ ಹೊರಟಿದೆ.. ಆದ್ರೆ ಇದರ ನಡುವೆಯೇ ರಾಕಿ ಅಭಿಮಾನಿಗಳಿಗೆ ಬೆಂಕಿಯಂತಹ ನ್ಯೂಸ್ ಸಿಕ್ಕಿದೆ..
ಅದೇನೆಂದ್ರೆ ಸಿನಿಮಾದ ಒಟಿಟಿ ರೈಟ್ಸ್ ಹಿಂದೆಂದೂ ಯಾವ ಕನ್ನಡದ ಸಿನಿಮಾ ಸೇಲಾಗದಷ್ಟು ಬಾರೀ ಮೊತ್ತಕ್ಕೆ ಸೇಲಾಗಿದೆಯಂತೆ..
ಅಷ್ಟೇ ಯಾಕೆ ಯಾವ ಸೌತ್ ಸಿನಿಮಾಗಳು ಇಷ್ಟು ದುಬಾರಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿಲ್ಲ ಎನ್ನಲಾಗ್ತಿದೆ..
ರಾಧೆ ಶ್ಯಾಮ್ ಸಿನಿಮಾ ನೇರ ಒಟಿಟಿಯಲ್ಲಿ ರಿಲೀಸ್ ಮಾಡಲು ಆಗ ಎರೆಡು ಒಟಿಟಿ ಫ್ಲಾಟ್ ಫಾರ್ಮ್ ಗಳ ನಡುವೆ ಪೈಪೋಟಿ ನಡೆದಿತ್ತು.. ನೆಟ್ ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ನಡುವೆ..
ಮೂಲಗಳ ಪ್ರಕಾರ 320 ಕೋಟಿ ವರೆಗೂ ಆಫರ್ ಮಾಡಲಾಗಿತ್ತು.. ಆದ್ರೆ ಗಮನಿಸಬೇಕಾದ ಸಂಗತಿ ಅಂದ್ರೆ ಆಗ ನೇರ ಒಟಿಟಿ ರಿಲೀಸ್ ಗೆ ಅಷ್ಟು ದುಬಾರಿ ಮೊತ್ತದ ಆಫರ್ ಸಿಕ್ಕಿತ್ತು.. ಸಿನಿಮಾತಂಡ ತಿರಸ್ಕರಿಸಿ ಥಿಯೇಟರ್ ಗೆ ರಿಲೀಸ್ ಮಾಡಿತತ್ತು..
ಆದ್ರೆ ಈಗಾಗಲೇ ಥಿಯೇಟರ್ ಗಳಲ್ಲಿ ಅಬ್ಬರಿಸುತ್ತಿರುವ KGF 2 ಸಿನಿಮಾ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ 320 ಕೋಟಿ ರೂಪಾಯಿಗೆ ಸೇಲಾಗಿದ್ಯಂತೆ.. ಈ ಸುದ್ದಿ ರಾಕಿ ಅಭಿಮಾನಿಗಳ ಸಂತಸ ಡಬಲ್ ಮಾಡಿದೆ..
ಯಶ್ ಅಭಿನಯದ ಚಿತ್ರವು ಮೇ 27 ರಿಂದ ಎಲ್ಲಾ ಐದು ಭಾಷೆಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ OTT ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮಿಂಗ್ ಪ್ರಾರಂಭವಾಗುತ್ತದೆ ಎಂದು ವರದಿಯಾಗಿದೆ.
ಅಂದ್ಹಾಗೆ ಮೊದಲ ಭಾಗವೂ ಅಮೇಜಾನ್ ಪ್ರೈಮ್ ನಲ್ಲಿ ಲಭ್ಯವಿದೆ..