ಕಿರುತೆರೆಯಲ್ಲಿ JK ಆಗಿಯೇ ಅತಿ ಹೆಚ್ಚು ಫೇಮಸ್ ಆಗಿದ್ದ ನಟ ಕಾರ್ತಿಕ್ ಜಯರಾಮ್ ಅವರು ಹಿರಿತೆರೆಯಲ್ಲೂ ಮೋಡಿ ಮಾಡಿದ್ದಾರೆ.. ರಾಮಾಯಣ ಧಾರಾವಾಹಿಯಲ್ಲಿ ರಾವಣನಾಗಿ ಮಿಂಚಿದ್ದರು..
ಈ ರಾವಣನನ ಪಾತ್ರದ ಮೂಲಕ ಆಲ್ ಓವರ್ ಇಂಡಿಯಲ್ಲಿ ಜನರು ಜೆಕೆಯನ್ನ ಗುರುತಿಸಿದರು.. ಸ್ಯಾಂಡಲ್ ವುಡ್ ನಲ್ಲೂ ಬ್ಯುಸಿಯಿರುವ ನಟನಿಗೆ ಈಗ ಪ್ರತಿಷ್ಠಿತ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದು ಬಂದಿದೆ. ರಾವಣನ ಪಾತ್ರಕ್ಕಾಗಿಯೇ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ.
ಮುಂಬೈನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಜೆಕೆ ಅಲ್ಲಿ ಈ ಅವಾರ್ಡ್ ಅನ್ನು ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.. ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.. ” ದಾದಾ ಸಾಹೇಬ್ ಫಾಲ್ಕೆ ಅವಾರ್ಡ್. ಹಾರ್ಡ್ ವರ್ಕ್ ಖಂಡಿತವಾಗಿಯೂ ನಿಮಗೆ ಬೆಲೆ ತಂದುಕೊಡುತ್ತೆ. ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ನನ್ನ ಮುಡಿಗೊಂದು ಗರಿ.” ಎಂದು ಬರೆದುಕೊಂಡಿದ್ದಾರೆ.