ವಿಶ್ವವೇ ಎದುರು ನೋಡ್ತಿದ್ದ ಡಾಕ್ಟರ್ ಸ್ಟ್ರೇಂಜ್ ಸಿನಿಮಾ ಭಾರತ ಸೇರಿದಂತೆ ವಿಶ್ವದಾದ್ಯಂತ ರಿಲೀಸ್ ಆಗಿದೆ.. ಆದ್ರೂ KGF 2 ಹವಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ತಗ್ಗಿಲ್ಲ.. ಈಗಲೂ ಬಾಕ್ಸ್ ಆಫೀಸ್ ನಲ್ಲಿ KGF 2 ಆರ್ಭಟ ಮುಂದುವರೆದಿದೆ,,
ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕಲೆಕ್ಷನ್: ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಯಶ್, ಸಂಜಯ್ ದತ್, ರವೀನ್ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಚಿತ್ರವು ದಂಗಲ್ ಅನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಮತ್ತು 400 ಕೋಟಿ ರೂಪಾಯಿಗಳೊಂದಿಗೆ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿದೆ.. ವರ್ಲ್ಡ್ ವೈಡ್ ಕಲೆಕ್ಷನ್ ನಲ್ಲಿ ಭಾರತದ 3ನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದ್ದು ಕನ್ನಡದ ಸಿನಿಮಾ ಈಗ ಇತಿಹಾಸ ಸೃಷ್ಟಿಸಿದೆ..
ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನು ಮುರಿಯುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರವು ತನ್ನ ಅಗಾಧವಾದ ಕಲೆಕ್ಷನ್‌ಗಳೊಂದಿಗೆ ದಾಖಲೆಯ ಮೇಲೆ ದಾಖಲೆಗಳನ್ನು ಹೊಡೆದಿದೆ. Jersey, Heropanti 2 ಮತ್ತು Runway 34 ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾದರೂ ಕೆಜಿಎಫ್ ಮುಂದೆ ಡಮ್ಮಿ ಸಾಬೀತಾಗಿದೆ..
ಇದು SS ರಾಜಮೌಳಿಯವರ ಬಾಹುಬಲಿ – ದ ಕನ್‌ಕ್ಲೂಷನ್ ನಂತರ ದಂಗಲ್, PK ಮತ್ತು ತನ್ಹಾಜಿ – ದಿ ಅನ್‌ಸಂಗ್ ವಾರಿಯರ್ ನಂತರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಚಿತ್ರದ ಸಾರ್ವಕಾಲಿಕ ಬಾಕ್ಸ್ ಆಫೀಸ್ ಸಂಗ್ರಹಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇದು ಸಾರ್ವಕಾಲಿಕ ಬ್ಲಾಕ್ಬಸ್ಟರ್ ಎಂದು ಘೋಷಿಸಿದರು.
ಟ್ವೀಟ್ ಮಾಡಿ ವಾರ 1: 268.63 ಕೋಟಿ ವಾರ 2: 80.18 ಕೋಟಿ ವಾರ 3: 49.14 ಕೋಟಿ ಒಟ್ಟು: 397.95 ಕೋಟಿ , All time Blockbuster ಎಂದಿದ್ದಾರೆ.
#KGF2 biz at a glance…
⭐ Week 1: ₹ 268.63 [Thu release; 8 days]
⭐ Week 2: ₹ 80.18 cr
⭐ Week 3: ₹ 49.14 cr
⭐ Total: ₹ 397.95 cr#India biz. #Hindi version.
ALL TIME BLOCKBUSTER. pic.twitter.com/TMzi9Uiyi7— taran adarsh (@taran_adarsh) May 6, 2022