KGF 2 ಸಿನಿಮಾ ನೋಡಿ ಹಾಡಿ ಹೊಗಳಿದ ಶಿವಣ್ಣ
ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF 2 ಭರ್ಜರಿ ಯಶಸ್ಸು ಕಂಡಿದ್ದು ಈಗಾಗಲೇ ಹಿಂದಿ ಆವೃತ್ತಿಯಲ್ಲೇ ಕಲೆಕ್ಷನ್ 400 ಕೋಟಿ ಮೀರಿದೆ.. ವಿಶ್ವದಾದ್ಯಂತ 1100 ಕೋಟಿ ಕಲೆಕ್ಷನ್ ದಾಟಿದ್ದು , ದಂಗಲ್ , RRR ರೆಕಾರ್ಡ್ ಬ್ರೇಕ್ ಮಾಡಿದೆ.. ಸಿನಿಮಾವನ್ನ ಅಲ್ಲು ಅರ್ಜುನ್ , ಪ್ರಭಾಸ್ , ಉಪೇಂದ್ರ ಸೇರಿದಂತೆ ಸ್ಟಾರ್ ಗಳು ಕೊಂಡಾಡಿದ್ದಾರೆ..
KGF 2 ಸಿನಿಮಾ ನೋಡಿ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೆಚ್ಚಿಕೊಂಡಿದ್ದಾರೆ..
ಸಿನಿಮಾ ಚೆನ್ನಾಗಿದೆ. ಒಳ್ಳೆಯ ಫೋರ್ಸ್ ಸಿನಿಮಾದಲ್ಲಿದೆ.
ಸಿನಿಮಾಟೊಗ್ರಫಿ, ಸಂಗೀತ ಎಲ್ಲವೂ ಚೆನ್ನಾಗಿದೆ. ಯಶ್ ಅದ್ಭುತವಾಗಿ ಕಾಣ್ತಾರೆ. ಕೆಲವು ಸೀನ್ಸ್ ಅದ್ಭುತವಾಗಿವೆ. ಚೆನ್ನಾಗಿ ಕತೆಯನ್ನು ತೆರೆಗೆ ತಂದಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ..
ಅಲ್ಲದೇ ಕನ್ನಡದಿಂದ ಬಂದವರು ಯಾರೇ ಬೆಳೆದರು ನನಗೆ ಬಹಳ ಹೆಮ್ಮೆ. ಯಶ್ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಯಶ್ ಆರಂಭದ ದಿನದಲ್ಲೇ ಹೇಳುತ್ತಿದ್ದೆ, ತುಂಬಾ ಸ್ಮಾರ್ಟ್ ಆಗಿದ್ದೀಯ ಎಂದು. ಬಹಳ ಎತ್ತರಕ್ಕೆ ಬೆಳೆಯುತ್ತೀಯ ಎಂದು ನಾನು ಈ ಹಿಂದೆಯೇ ಯಶ್ಗೆ ಹೇಳಿದ್ದೆ ಎಂದಿದ್ದಾರೆ..
ನನಗೆ ಆ ಹುಡುಗ ಅಂದ್ರೆ ಬಹಳ ಪ್ರೀತಿ. ನಮ್ಮ ಕನ್ನಡ ಚಿತ್ರರಂಗದ ಎಲ್ಲ ಹಿರೋಗಳನ್ನು ಕಂಡರೆ ನನಗೆ ಬಹಳ ಪ್ರೀತಿ, ಆದರೆ ಯಶ್ ಮೇಲೆ ಪ್ರತ್ಯೇಕವಾಗಿ ಪ್ರೀತಿ ಇದೆ. ಅದು ಏಕೆಂದು ನನಗೆ ಗೊತ್ತಿಲ್ಲ. ಯಶ್ ನೋಡಿದರೆ ನನಗೆ ನನ್ನ ತಮ್ಮನನ್ನು ನೋಡಿದ ಹಾಗಾಗುತ್ತದೆ. ಒಳ್ಳೆಯ ಎನರ್ಜಿ, ಕುತೂಹಲ, ಶ್ರಮಪಟ್ಟು ಕೆಲಸ ಮಾಡುವ ಹಂಬಲ ಯಶ್ಗೆ ಇದೆ ಎಂದದಿದ್ದಾರೆ..