ಮಂಜು ವಾರಿಯರ್ ಅವರು ಅಪಾಯದಲ್ಲಿದ್ದಾರೆ.. ಅವರನ್ನ ಒತ್ತೆಯಾಳಾಗಿರಿಸಿಕೊಳ್ಳಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಮಾಲಿವುಡ್ ನಿರ್ದೇಶಕ , ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ಇತ್ತೀಚೆಗೆ ಅರೆಸ್ಟ್ ಆಗಿದ್ದರು.. ಅರೆಸ್ಟ್ ಆದ ಒಂದು ದಿನದ ನಂತರೇ ಜಾಮೀನಿನ ಮೇಲೆ ಹೊರಬಂದಿದ್ದಾರೆ..
ಶುಕ್ರವಾರ, ಮೇ 6 ರಂದು, ಸನಲ್ ಕುಮಾರ್ ಶಶಿಧರನ್ ಅವರಿಗೆ ಜಾಮೀನು ನೀಡಲಾಯಿತು, ನಟ ಮಂಜು ವಾರಿಯರ್ ಅವರ ವಿರುದ್ಧ ಅಧಿಕೃತ ದೂರು ದಾಖಲಿಸಿದ ಕೇವಲ ಒಂದು ದಿನದ ನಂತರ ಜಾಮೀನು ಸಿಕ್ಕಿದೆ..
ಆಲುವಾ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ಆದೇಶ ಬಂದಿದೆ. ಗುರುವಾರ ಬಂಧಿಸಲಾದ ಮಲಯಾಳಂ ಚಲನಚಿತ್ರ ನಿರ್ಮಾಪಕ, ಸ್ಟೇಷನ್ ಜಾಮೀನಿನ ಮೇಲೆ ಹೋಗಲು ನಿರಾಕರಿಸಿದ ನಂತರ ಆಲುವಾ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಗುರುವಾರ ರಾತ್ರಿಯೇ ನಿರ್ಮಾಪಕರನ್ನು ಸ್ಟೇಷನ್ ಜಾಮೀನಿನ ಮೇಲೆ ಹೋಗಲು ಅಧಿಕಾರಿಗಳು ಸಿದ್ಧರಿದ್ದರು, ಆದರೆ ಚಿತ್ರ ನಿರ್ಮಾಪಕರು ಹಾಗೆ ಮಾಡಲು ನಿರಾಕರಿಸಿದರು ಎಂದು ತಿಳಿದುಬಂದಿದೆ,.. ಆದರೆ ಅವರು ನ್ಯಾಯಾಲಯಕ್ಕೆ ಕರೆದೊಯ್ಯಬೇಕೆಂದು ಒತ್ತಾಯಿಸುತ್ತಿದ್ದರು. ನಾವು ಅವರನ್ನು ಆಲುವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ, ಅಲ್ಲಿಂದ ಅವರು ಜಾಮೀನು ಪಡೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಜು ವಾರಿಯರ್ ಅವರು ಕೊಚ್ಚಿಯ ಎಲಮಕ್ಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಮಂಜು ವಾರಿಯರ್ ಅವರು ಚಲನಚಿತ್ರ ನಿರ್ಮಾಪಕರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ ಮಾನಹಾನಿ ಮತ್ತು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ವಾರದ ಆರಂಭದಲ್ಲಿ, ಮಾಲಿವುಡ್ ನಿರ್ದೇಶಕರು ನಟ ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು..