ಕಿರುತೆರೆ ಹಿರಿತೆರೆ ಎರಡರಲ್ಲೂ ಗಮನ ಸೆಳೆದು ಚಿರಪರಿಚಿತರಾಗಿದ್ದ ಖ್ಯಾತ ಕನ್ನಡದ ಹಾಸ್ಯ ನಟ ಮೋಹನ್ ಅವರು ನಿಧನರಾಗಿದ್ದಾರೆ..
ಮೋಹನ್ ಜುನೇಜ ಅವರು ಕೆಲಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಕೊನೆಎಯುಸಿರೆಳೆದಿದ್ದು ಚಿತ್ರರಂಗದ ಅನೇಕರು ಅವರಿಗೆ ಸಂತಾಪ ಸೂಚಿಸುತ್ತಿದ್ಧಾರೆ.
ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ತೀವ್ರ ಹದಗೆಟ್ಟಿತ್ತು.. ಹೀಗಾಗಿ ಅವರನ್ನು ಹೆಸರಘಟ್ಟದ ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಲೆದಿದ್ದಾರೆ..
ಮೋಹನ್ ಜುನೇಜ ಅವರು ಕನ್ನಡದ ಹಲವಾರು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹಾಸ್ಯನಟ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ KGF , KGF 2 ನಲ್ಲೂ ಕಾಣಿಸಿಕೊಂಡಿದ್ದು ಮಾನ್ ಸ್ಟರ್ ಡೈಲಾಗ್ ಹೊಡೆದು ಗಮನ ಸೆಳೆದಿದ್ದಾರೆ..