ನಿರ್ದೇಶಕ ಜಿಎಸ್ ವಿಘ್ನೇಶ್ ಜೊತೆ ನಯನತಾರಾ ಅವರು ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾ ನೇರ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಾಯಿದೆ.,. ಈ ಪ್ರೊಡಕ್ಷನ್ ಹೌಸ್ ಜೊತೆಗೆ ಇದು ನಯನತಾರಾ ಅವರ 2 ನೇ ಸಿನಿಮಾವಾಗಿದೆ..
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಮುಂದಿನ ಸಿನಿಮಾ ನಿರ್ಮಾಣ ಕಂಪನಿಯಾದ ಡ್ರೀಮ್ ವಾರಿಯರ್ ಪಿಕ್ಚರ್ಸ್ಗೆ O2 ಎಂದು ಹೆಸರಿಡಲಾಗಿದೆ. ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ.. ನಯನತಾರಾ ನಟಿಸುತ್ತಿರುವ ಮುಂಬರುವ ತಮಿಳು ಪ್ರಾಜೆಕ್ಟ್ ಶೀಘ್ರದಲ್ಲೇ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ.
ಜಿ ಎಸ್ ವಿಕ್ನೇಶ್ ನಿರ್ದೇಶನದ ಈ ಚಿತ್ರಕ್ಕೆ ವಿಶಾಲ್ ಚಂದ್ರಶೇಖರ್ ಸಂಗೀತ, ತಮಿಜ್ ಎ ಅಳಗನ್ ಡಿಒಪಿ ಮತ್ತು ಸೆಲ್ವ ಆರ್ ಕೆ ಸಂಕಲನವಿದೆ. ಸಿನಿಮಾದಲ್ಲಿ ರಿತ್ವಿಕ್ ಮತ್ತು ಇತರರು ನಟಿಸಿದ್ದಾರೆ. ಇದು 2016 ರಲ್ಲಿ ಕಾರ್ತಿ ಜೊತೆಯಾಗಿ ನಟಿಸಿದ ಕಾಶ್ಮೋರಾ ಚಿತ್ರದ ನಂತರ ಪ್ರೊಡಕ್ಷನ್ ಹೌಸ್ನೊಂದಿಗೆ ನಯನತಾರಾ ಅವರ ಎರಡನೇ ಸಹಯೋಗವಾಗಿದೆ.