ನನಗೆ ಎಲ್ಲವೂ ಟಾಲಿವುಡ್ ಎಂದ ಕರ್ನಾಟಕದ ಹುಡುಗಿ ಪೂಜಾ ಹೆಗ್ಡೆ
ಕನ್ನಡದ ಹುಡುಗಿ ಪೂಜಾ ಹೆಗ್ಡೆ ಟಾಲಿವುಡ್ , ಕಾಲಿವುಡ್ ನಲ್ಲಿ ಸ್ಟಾರ್ ನಟಿ… ಬಹುಬೇಡಿಕಯ ನಟಿ.. ಅತಿ ಹೆಚ್ಚು ಸಂಭಾವವನೆ ಪಡೆಯುವ ನಟಿಯರ ಪೈಕಿ ಒಬ್ಬರು.. ಟಾಪ್ 10 ಟಾಲಿವುಡ್ ನಟಿಯರ ಪೈಕಿ ಅಗ್ರಸ್ಥಾನದಲ್ಲಿರೋ ನಟಿ.. ಆಧ್ರೆ ಅದ್ಯಾಕೋ ಪೂಜಾ ಹೆಗ್ಡೆ ನಸೀಬ್ ಸರಿ ಇಲ್ಲ ಎನ್ನುಸ್ತಿದೆ..
ಬುಟ್ಟಬೊಮ್ಮಗೆ ಅದೃಷ್ಟ ಕೈಕೊಟ್ಟಿದ್ಯಾ ಎನ್ನುವ ಮಾತುಗಳು ಆರಂಭವಾಗಿಬಿಟ್ಟಿದೆ… ಅಲಾ ವೈಕುಂಠಪುರಂ ಲೋ ಸಿನಿಮಾದ ಸಕ್ಸಸ್ ನ ನಂತರ ಬಹುತೇಕ ಪೂಜಾ ಹೆಗ್ಡೆಗೆ ಸಿಕ್ಕಿರೋದೆಲ್ಲಾ ಸೋಲೇ.. ಬಹುನಿರೀಕ್ಷೆಯ ರಾಧೆ ಶ್ಯಾಮ್ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಗಳಿಸಿಲ್ಲ..
ದಳಪತಿ ವಿಜಯ್ ನಟನೆಯ ಬೀಸ್ಟ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಕಂಡಿಲ್ಲ.. ಈಗ ರಾಮ್ ಚರಣ್ ಚಿರಂಜೀವಿ ನಟನೆಯ ಆಚಾರ್ಯ ಸಹ ಫ್ಲಾಪ್ ಲಿಸ್ಟ್ ಸೇರಿಕೊಂಡಿದೆ.. ಹೀಗೆ ಪೂಜಾ ಹೆಗ್ಡೆಗೆ ಹ್ಯಾಟ್ರಿಕ್ ಸೋಲಾಗಿರೋದು , ಅವರ ಅಭಿಮಾನಿಗಳನ್ನ ವಿಚಲಿತರನ್ನಾಗಿಸಿದೆ..
ಮತ್ತೊಂದ್ ಪೂಜಾ ಹೆಗ್ಡೆ ಅವರದ್ದು ಐರನ್ ಲೆಗ್ ಎಂದೂ ಸಹ ಟ್ರೋಲ್ ಮಾಡಲಾಗ್ತಿದೆ..
ಅಂದ್ಹಾಗೆ ಪೂಜಾ ಮುಂದೆ ಎರೆಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಈ ನಡುವೆ ಮಾಧ್ಯಮವೊಂದರ ಜೊತೆಗೆ ಮಾತನಾಡುವಾಗ ನನಗೆ ಟಾಲಿವುಡೇ ಎಲ್ಲಾ ಎಂದು ತೆಲುಗು ಸಿನಿನಮಾರಂಗದ ಪರ ತಮ್ಮ ಪ್ರೀತಿ ತೋರಿಸಿಕೊಂಡಿದ್ದಾರೆ.. ರಣವೀರ್ ಸಿಂಗ್ ಅಭಿನಯದ ‘ಸರ್ಕಸ್’ ಮತ್ತು ಸಲ್ಮಾನ್ ಖಾನ್ ಅವರ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾಗಳಲ್ಲಿ ಪೂಜಾ ಕಾಣಿಸಿಕೊಳ್ಳಲಿದಸ್ದಾರೆ..
ತೆಲುಗು ಪ್ರೇಕ್ಷಕರು ತನ್ನ ಸದಸ್ಯನನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ತೆಲುಗು ಚಿತ್ರರಂಗದಲ್ಲಿನ ಜನಪ್ರಿಯತೆ ಮತ್ತು ಯಶಸ್ಸು ನನಗೆ ಬೇಕಾದುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ನೀಡಿದೆ ಎಂದು ಅವರು ಹೇಳಿದರು.