ನನ್ನ ಕನ್ಯತ್ವ ಮಾರಾಟಕ್ಕಿಟ್ಟು ಸೋನಾಕ್ಷಿ ಸ್ಟಾರ್ ಆಗಿದ್ದು : ಪೂಜಾ ಮಿಶ್ರ ಸ್ಪೋಟಕ ಹೇಳಿಕೆ
ಬಾಲಿವುಡ್ ಮಂದಿ ಕೇವಲ ಕಾಂಟ್ರರ್ವಸಿಗಳಿಂದಲೇ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ.. ಇಲ್ಲಾ ಸಿನಿಮಾಗಳು ಅಟ್ಟರ್ ಪ್ಲಾಫ್ , ರೀಮೇಕ್ ಸಿನಿಮಾಗಳನ್ನ ಮಾಡ್ತಿದ್ದಾರೆ ಅನ್ನೋ ವಿಚಾರಗಳಿಗೆ ಮಾತ್ರವೇ ಸುದ್ದಿಯಾಗ್ತಿದ್ದಾಋಎಡ..
ಇದೀಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕೂಡ ಬೇಡದ ವಿಚಾರದಿಂದ ಸುದ್ದಿಯಲ್ಲಿದ್ಧಾರೆ,. ಸೋನಾಕ್ಷಿ ಸಿನ್ಹ ತಮ್ಮನ್ನ ಬೇರೆಯವರ ಜೊತೆಗೆ ಮಲಗಲು ಬಿಟ್ಟು ತಾವು ನಾಯಕಿಯಾದ್ರು ಎಂದು ನಟಿಯೊಬ್ಬರು ಆರೋಪಿಸಿದ್ದು ಬಿ ಟೌನ್ ನಲ್ಲಿ ಈ ಸುದ್ದಿ ಬಿರುಗಾಳಿ ಎಬ್ಬಿಸಿದೆ..
ಸಲ್ಮಾನ್ ಖಾನ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು ಸೋನಾಕ್ಷಿ.. ದಬಾಂಗ್ ಸಿನಿಮಾ ಮೂಲಕ.. ಈ ಸಿನಿಮಾ ಹಿಟ್ ಆಗಿತ್ತು.. ಇದೀಗ ಈ ನಟಿ ವಿರುದ್ಧ ಮಾಜಿ ಬಿಗ್ ಬಾಸ್ ಸ್ಪರ್ಧಿ ಪೂಜಾ ಮಿಶ್ರಾ ಗಂಭೀರವಾದ ಆರೋಪ ಮಾಡಿದ್ದಾರೆ.. ಸೊನಾಕ್ಷಿ ಸಿನ್ಹಾ ಮೊದಲ ಸಿನಿಮಾದ ಅವಕಾಶವನ್ನು ಪಡೆಯಬೇಕಾದ್ರೆ ತಮ್ಮನ್ನು ಕೆಟ್ಟದಾಗಿ ಬಳಸಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ.
ಸೊನಾಕ್ಷಿ ಸಿನ್ಹಾರ ತಂದೆ ಖ್ಯಾತ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹಾಗೂ ಅವರ ಪತ್ನಿ ಪೂನಂ ಸಿನ್ಹಾ ವಿರುದ್ಧವೂ ಆರೋಪ ಮಾಡಿದ್ದಾರೆ.. ತಮ್ಮ ಮಗಳಿಗೆ ಸಿನಿಮಾ ಅವಕಾಶ ಕೊಡಿಸಲು ನನ್ನನ್ನು ಸೆಕ್ಸ್ ಸ್ಕ್ಯಾಮ್ ಗೆ ಬಳಸಿಕೊಂಡರು ನನ್ನ ವಿರುದ್ಧ ಮಾಟ-ಮಂತ್ರ ಮಾಡಿಸಿದ್ದರು ಎಂದು ಹೇಳಿದ್ದಾರೆ.
ಮಾಧ್ಯವೊಂದರ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು ಇದೀಗ ಈ ವಿಚಾರ ಹಲ್ ಹಲ್ ಸೃಷ್ಟಿ ಮಾಡಿದೆ.. ನನ್ನ ಕನ್ಯತ್ವವನ್ನು ಮಾರಾಟಕ್ಕಿಟ್ಟು ಶತ್ರುಘನ್ ಸಿನ್ಹಾ ತನ್ನ ಮಗಳನ್ನು ಸ್ಟಾರ್ ಮಾಡಿದರು. ಸೊನಾಕ್ಷಿಗೆ ನಟಿಯಾಗುವುದು ಇಷ್ಟವಿರಲಿಲ್ಲ, ಆಕೆ ಫ್ಯಾಷನ್ ಡಿಸೈನರ್ ಆಗಬೇಕು ಎಂದುಕೊಂಡಿದ್ದಳು ಎಂದಿದ್ದಾರೆ.
ಪೂಜಾರ ತಂದೆ ಹಾಗೂ ಶತ್ರುಘನ್ ಸಿನ್ಹಾ ಒಳ್ಳೆಯ ಗೆಳೆಯರಾಗಿದ್ದು, ಶತ್ರುಘನ್ ಸಿನ್ಹಾ ಪತ್ನಿ ಪೂನಂ ಸಿನ್ಹಾ, ಪೂಜಾರ ತಂದೆಯ ಬ್ರೇನ್ ವಾಷ್ ಮಾಡಿ, ಕೇವಲ ವೇಶ್ಯಾವಾಟಿಕೆ ನಡೆಸುವರಷ್ಟೆ ಸಿನಿಮಾ ರಂಗಕ್ಕೆ ಬರಲು ಸಾಧ್ಯವೆಂದು ಹೇಳಿದ್ದರು.. ಇದರಿಂದ ಪೂಜಾರ ತಂದೆ ಆಕೆಯನ್ನು ಸಿನಿಮಾಗಳಲ್ಲಿ ನಟಿಸಲು ಬಿಡಲಿಲ್ಲ.. ಪೂಜಾ ಮಿಶ್ರಾರ ತಂದೆ ಪುಣೆಗೆ ವಾಸ್ತವ್ಯ ಬದಲಿಸಿದ ಬಳಿಕ ಶತ್ರುಘನ್ ಸಿನ್ಹಾ ಕುಟುಂಬ ಪೂಜಾ ಮಿಶ್ರಾರನ್ನು ತುಳಿಯಲು ಪ್ರಾರಂಭಿಸಿತು. ಶತ್ರುಘನ್ ಸಿನ್ಹಾ ಹಾಗೂ ಕುಟುಂಬ ಪೂಜಾರಿಂದ ಸುಮಾರು 35 ಸಿನಿಮಾಗಳನ್ನು ಕಿತ್ತುಕೊಂಡಿತಂತೆ ಎಂದಿದ್ದಾರೆ.
ಅಲ್ಲದೇ ನಾನು ಒಮ್ಮೆ ಶತ್ರುಘನ್ ಸಿನ್ಹಾ ಮನೆಗೆ ಹುಟ್ಟುಹಬ್ಬಕ್ಕೆ ಹೋಗಿದ್ದಾಗ ಪೂನಂ ಸಿನ್ಹಾ ನನಗೆ ಏನೋ ತಿನ್ನಿಸಿ ನನ್ನ ವಿರುದ್ಧ ಮಾಟಮಂತ್ರ ಪ್ರಯೋಗಿಸಿದರು.. ನಾನಿಲ್ಲದಾಗ ನನ್ನ ಮನೆಗೆ ಬಂದು ನನ್ನ ವಸ್ತುಗಳನ್ನು ಕದಿಯುತ್ತಿದ್ದರು ಎಂದು ಆರೋಪಿಸಿದ್ದಾರೆ.
ಶತ್ರುಘನ್ ಸಿನ್ಹಾ ನನ್ನ ಕನ್ಯತ್ವವನ್ನು ಮಾರಾಟಕ್ಕಿಟ್ಟು, ಆತನ ಮಗಳಿಗೆ ಸಿನಿಮಾ ಅವಕಾಶ ಕೊಡಿಸಿದ. ನನಗೆ ಡ್ರಗ್ಸ್ ನೀಡಿ ನನ್ನ ಜೀವನ ಹಾಗೂ ವೃತ್ತಿಯನ್ನು ಹಾಳು ಮಾಡಿದ. ನನ್ನ ವೃತ್ತಿ ಜೀವನ ಹಾಳಾಗಿದ್ದಕ್ಕೆ ನೇರವಾಗಿ ಶತ್ರುಘನ್ ಸಿನ್ಹಾ ಕಾರಣ ಎಂದು ಹೇಳಿದ್ದಾರೆ..