Deepika Padukone
ದೀಪಿಕಾ ಪಡುಕೋಣೆ 75 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಂಗಳವಾರ ರಾತ್ರಿ, ಕೇನ್ಸ್ ಚಲನಚಿತ್ರೋತ್ಸವವು ಈ ವರ್ಷದ ಪಾಮ್ ಡಿ’ಓರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವ ತೀರ್ಪುಗಾರರ ಅಧ್ಯಕ್ಷರು ಮತ್ತು ಸ್ಪರ್ಧಾತ್ಮಕ ಸದಸ್ಯರ ತೀರ್ಪುಗಾರರನ್ನು ಬಹಿರಂಗಪಡಿಸಿತು. ಇದರಲ್ಲಿ ಬಾಲಿವುಡ್ ದಿವಾ ದೀಪಿಕಾ ಭಾಗವಾಗಿದ್ದಾರೆ.2017 ರಲ್ಲಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ರೆಡ್ ಕಾರ್ಪೆಟ್ ನಲ್ಲಿ ವಾಕ್ ಮಾಡಿದ್ದ ದೀಪಿಕಾ, ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಸ್ಗರ್ ಫರ್ಹಾದಿ, ಜೆಫ್ ನಿಕೋಲ್ಸ್, ರೆಬೆಕಾ ಹಾಲ್, ನೂಮಿ ಸೇರಿದಂತೆ ಇತರ ತೀರ್ಪುಗಾರರ ಟೀಮ್ ಜಾಯಿನ್ ಆಗಿದ್ದಾರೆ.
ಮೇ 17 ರಂದು ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಲಿದ್ದು, ಮೇ 28 ರಂದು ಕೇನ್ಸ್ನಲ್ಲಿ ನಡೆಯುವ ಸಮಾರಂಭದಲ್ಲಿ ತೀರ್ಪುಗಾರರು ಈ ವರ್ಷದ ವಿಜೇತರನ್ನು ಘೋಷಿಸುತ್ತಾರೆ.
ಈ ವರ್ಷದ ಫೆಸ್ಟಿವಲ್ ಡಿ ಕೇನ್ಸ್ ತೀರ್ಪುಗಾರರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಸ್ಥಾನ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ, ಅಹ್ವಾನ ಪತ್ರಿಕೆಯ ಟಿಪ್ಪಣಿಯಲ್ಲಿ “ಭಾರತೀಯ ನಟಿ, ಸಮಾಜ ಸೇವಕಿ ಮತ್ತು ನಿರ್ಮಾಪಕಿ ದೀಪಿಕಾ ಪಡುಕೋಣೆ, ಅವರ ದೇಶದಲ್ಲಿ ದೊಡ್ಡ ತಾರೆ. ದೀಪಿಕಾ 30 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ವಿನ್ ಡೀಸೆಲ್ ಅವರೊಂದಿಗೆ ‘XXX ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದರು. ‘ಛಪಾಕ್’ ಚಿತ್ರದ ಮೂಲಕ ತಮ್ಮ ನಿರ್ಮಾಣ ಸಂಸ್ಥೆ ‘ಕಾ ಪ್ರೊಡಕ್ಷನ್’ ಪ್ರಾರಂಭಿಸಿದರು ಎಂಬ ಪರಿಚಯ ಮಾಡಿಕೊಡಲಾಗಿದೆ.