harshika poonacha : ‘ಮಾರಕಾಸ್ತ್ರ’ದಲ್ಲಿ ನ್ಯೂಸ್ ರಿಪೋರ್ಟರ್ ಆದ ಹರ್ಷಿಕಾ…!!
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚಾ ಸದ್ಯ ಬೋಜಪರಿ ಚಿತ್ರರಂಗದಲ್ಲೂ ಬ್ಯುಸಿಯಿದ್ದಾರೆ. ಇದೀಗ ಕನ್ನಡದ ಹೊಸ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದು ಈ ಸಿನಿಮಾಗೆ ಮಾರಕಾಸ್ತ್ರ ಎಂದು ಟೈಟಲ್ ಇಡಲಾಗಿದೆ..
ಈ ಸಿನಿಮಾದಲ್ಲಿ ನ್ಯೂಸ್ ರಿರ್ಪೋಟರ್ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಎಲ್ಲೆ ಕ್ರೈಂ ನಡೆದರು ಅದನ್ನು ಭೇದಿಸುವ ಕ್ರೈಂ ವರದಿಗಾರ್ತಿ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.
ಸದ್ಯ ಹರ್ಷಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.,. ಅದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ…
ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲರ್ ಚಿತ್ರದಲ್ಲಿ ಹೊಸ ಪ್ರತಿಭೆ ಆನಂದ್ ಆರ್ಯಗೆ ನಾಯಕಿಯಾಗಿ ಹರ್ಷಿಕಾ ಕಾಣಿಸಿಕೊಳ್ಳತ್ತಿದ್ದಾರೆ. ಕ್ರೈಂ ಪ್ರಕರಣವನ್ನು ಭೇದಿಸುವ ವರದಿಗಾರ್ತಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ನಟಿ ಹರ್ಷಿಕಾ ಕೈಯಲ್ಲಿ ಎರಡು ಬೋಜಪುರಿ ಚಿತ್ರಗಳಿದ್ದು, ತಾಯ್ತ, ಓ ಪ್ರೇಮ, ಸ್ತಬ್ಧ, ಸೂಪರ್ ಆಗಿದೆ ಲವ್ ಸ್ಟೋರಿ ಚಿತ್ರಗಳು ರಿಲೀಸ್ಗೆ ರೆಡಿಯಿದೆ.