ಕರ್ನಾಟಕ ಸಿನಿಮಾ ಅಕಾಡೆಮಿ ಅಧ್ಯಕ್ಷರಾಗಿರುವ ನಟ ಸುನೀಲ್ ಪುರಾಣಿಕ್ ಪುತ್ರನಾಗಿರುವ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಇದೀ ತಿಂಗಳ 18 ರಂದು ಕಿರುತೆರೆ ಖ್ಯಾತ ನಟಿ ದೀಪಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ಧಾರೆ..
ಮೇ 18 ರಂದು ಧಾರವಾಡದಲ್ಲಿ ಇವರ ವಿವಾಹ ನಡೆಯಲಿದೆ. ಕಿರುತೆರೆ ಖ್ಯಾತ ನಟಿ ದೀಪಾ ಜಗದೀಶ್ ಜತೆ ಸಾಗರ್ ಮದುವೆಯಾಗಲಿದ್ದಾರೆ..
‘ಮಹಾಸತಿ’ ಧಾರಾವಾಹಿಯಲ್ಲಿ ಈ ಜೋಡಿ ಭೇಟಿಯಾಗಿತ್ತು.. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಗೆ ಬದಲಾಗಿ ಈಗ ಮದುವೆಯ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ..
ಬ್ರಹ್ಮಾಸ್ತ್ರ, ಮಹಾಸತಿ ಮತ್ತು ತೆಲುಗಿನ ಪ್ರೇಮ ಸಾಗರ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ದೀಪಾ ಜಗದೀಶ್, ಕ್ರಿಟಿಕಲ್ ಕೀರ್ತನೆಗಳು ಮತ್ತು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಚಿತ್ರಗಳಲ್ಲೂ ನಟಿಸಿದ್ದಾರೆ.