RRR ಸಿನಿಮಾದ ನಂತರ ದೇಶಾದ್ಯಂತ ಅಭಿಮಾನಿಗಳನ್ನ ಹೊಂದಿ ಇಂಡಿಯನ್ ಸ್ಟಾರ್ ಆಗಿ ಹೊರಹೊಮ್ಮಿರುವ ರಾಮ್ ಚರಣ್ RC 15 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ..
ಇತ್ತೀಚೆಗೆ ಅವರ ಆಚಾರ್ಯ ಸಿನಿಮಾ ರಿಲೀಸ್ ಆಗಿತ್ತು.. ಆದ್ರೆ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನ ಕಾಣ್ತಿಲ್ಲ..
ಇದೀಗ ಪತ್ನಿ ಉಪಾಸನಾಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ.
ಸದ್ಯ ರಾಮ್ ಚರಣ್ ಶಂಕರ್ ನಿರ್ದೇಶನದ RC 15 ಚಿತ್ರದ ಶೂಟಿಂಗ್ ಗೆ ವಿಶಾಖಪಟ್ಟಣಕ್ಕೆ ತೆರೆಳಿದ್ದಾರೆ. ಹೀಗಾಗಿ ವಕೇಶನ್ ಗೆ ತೆರಳಲು ಇನ್ನೂ ಒಂದಿಷ್ಟು ಸಮಯ ಕಾಯಬೇಕಾಗುತ್ತದೆ ಅಂತಾ ಪತ್ನಿಗೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿ ಎಲ್ಲರ ಗಮನ ಸೆಳೆದಿದಸ್ದಾರೆ..
ಕೊವೀಡ್ ಕಾರಣದಿಂದ ಒಂದು ಚಿತ್ರ ಮುಗಿದ ತಕ್ಷಣ ಬೇರೆ ಪ್ರಾಜೆಕ್ಟ್ ಕೈಗಿತ್ತಿಕೊಳ್ತಿದ್ದಾರೆ. ಹಾಗಾಗಿ ಬ್ರೇಕ್ಯಿಲ್ಲದೇ ಕೆಲಸ ಮಾಡ್ತಿರೋ ರಾಮ್ಚರಣ್ ಇದೀಗ ತಮ್ಮ ಫೋಟೋ ಶೇರ್ ಮಾಡಿ, ಮಡದಿಗೆ ವಿಶೇಷವಾಗಿ ಮನವಿ ಮಾಡಿದ್ದಾರೆ. ವಕೇಶನ್ಗೆ ಹೋಗಲು ಇನ್ನು ಒಂದಿಷ್ಟು ಸಮಯ ಬೇಕು ಅಂತಾ ಪ್ರೀತಿಯಿಂದ ಮನವಿ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗ್ತಿದೆ.