ಅಬ್ಬಾ ಲಾಟ್ರಿ….ಬೆಂಕಿ ಸಿನಿಮಾದ ಓಕೆನಾ ಸಾಂಗ್ ಗೆ ಹೆಜ್ಜೆ ಹಾಕಿ Iphone 13 ಗೆಲ್ಲಿ?
ಅನೀಶ್ ಕೊಟ್ರು ಬಂಪರ್ ಆಫರ್…ಬೆಂಕಿ ಸಿನಿಮಾದ ಓಕೆನಾ ಸಾಂಗ್ ಗೆ ರೀಲ್ಸ್ ಮಾಡಿ ಐಫೋನ್ ಗೆಲ್ಲಿ?
ಎಲ್ಲೆಲ್ಲೂ ಬೆಂಕಿ ಸಿನಿಮಾದ ಸಿಂಗಿಂಗೂ ಗುಂಗು ಹಿಡಿಸಿದೆ. ಅನೀಶ್ ತೇಜೇಶ್ವರ್ ಭರ್ಜರಿ ಸ್ಟೆಪ್ಸ್ ಹಾಕಿರುವ..ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ, ಆನಂದ್ ರಾಜವಿಕ್ರಮ್ ಸಂಗೀತವಿರುವ, ಐಶ್ವರ್ಯ ರಂಗರಾಜನ್ ಹಾಗೂ ಪಂಚಮ್ ಜೀವ ಧ್ವನಿಯಾಗಿರುವ ಓಕೆನಾ ಹಾಡು ಇಂಟರ್ ನೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸ್ತಿದೆ.
ಕಲರ್ ಫುಲ್ ಆಗಿ ಮೂಡಿ ಬಂದಿರುವ ಓಕೆ ನಾ ?? ಸಾಂಗ್ ಅತ್ಯುತ್ತಮವಾಗಿ ರೀಲ್ಸ್ ಮಾಡಿದವರಿ ಬೆಂಕಿ ಸಿನಿಮಾ ಬಳಗ Iphone 13 ಬಹುಮಾನ ನೀಡುವುದಾಗಿ ಅನೌನ್ಸ್ ಮಾಡಿದೆ.
ಪಕ್ಕ ಮಾಸ್ ಹಾಗೂ ಕಮರ್ಷಿಯಲ್ ಬೆಂಕಿ ಸಿನಿಮಾವನ್ನು ವಿಂಕ್ವಿಷನ್ ಪ್ರೊಡಕ್ಷನ್ ಬ್ಯಾನರ್ನಡಿ ಅನೀಶ್ ತೇಜೇಶ್ವರ್ ನಿರ್ಮಾಣ ಮಾಡ್ತಿದ್ದು, ಇದು ಇವರ ಹತ್ತನೇ ಸಿನಿಮಾವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎ.ಆರ್.ಬಾಬು ಅವರ ಪುತ್ರ ಶಾನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಣ್ಣ-ತಂಗಿ ಸೆಂಟಿಮೆಂಟ್ ಕಥೆಯ ಜೊತೆಗೆ, ಹಳ್ಳಿ ಸೊಡಗಿನ ಕಂಪು ಬೆಂಕಿ ಸಿನಿಮಾದಲ್ಲಿದೆ. ಸದ್ಯ ಸಖತ್ ಸದ್ದು ಮಾಡ್ತಿರುವ ಬೆಂಕಿ ಬೊಂಬಾಟ್ ಗಾನಬಜಾನಕ್ಕೆ ನೀವು ಜಭರ್ದಸ್ತ್ ಸ್ಟೆಪ್ಸ್ ಹಾಕಿ ಐಫೋನ್ ನಿಮ್ಮದಾಗಿಸಿಕೊಳ್ಳಿ. ಹಾಗಿದ್ರೆ ಮತ್ಯಾಕೆ ತಡ ಮೊಬೈಲ್ ಎತ್ತಿಕೊಳ್ಳಿ ಓಕೆನಾ ಹಾಡಿಗೆ ಹೆಜ್ಜೆ ಹಾಕಿ.