Lockup ಗ್ರ್ಯಾಂಡ್ ಫಿನಾಲೆ : ಮುನಾವರ್ ಫಾರುಕಿಗೆ ಟ್ರೋಫಿ..!!! ಪಾಯಲ್ ರೋಹಟಗಿ ಮೊದಲ ರನ್ನರ್ ಅಪ್..!!
LOCKUP : ಕಂಗನಾ ರಣೌತ್ ನಡೆಸಿಕೊಡ್ತಿದ್ದ ಡೇರಿಂಗ್ ಒಟಿಟಿ ರಿಯಾಲಿಟಿ ಶೋ ‘ಲಾಕ್ ಅಪ್’ ಕೊನೆಗೂ ಗ್ರ್ಯಾಂಡ್ ಫಿನಾಲೆ ಮೂಲಕ ಮುಕ್ತಾಯಗೊಂಡಿದೆ.. ಮೊದಲ ಸೀಸನ್ ನ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಅನೌನ್ಸ್ ಆಗಿದ್ದು , ಮುನ್ನಾವರ್ ಫಾರುಕಿ ವಿನ್ನರ್ ಟ್ರೋಫಿ ಗೆದ್ದು ಬೀಸಗಿದ್ಧಾರೆ. ಪಾಯಲ್ ರೋಹಟಗಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಕಾಂಟ್ರವರ್ಸಿ ಕ್ವೀನ್ ಕಂಗನಾ ರಣೌತ್ ನಡೆಸಿಕೊಡ್ತಿದ್ದ ಕಾಂಟ್ರವರ್ಸಿ ಶೋನಲ್ಲಿ ಹೆಚ್ಚಾಗಿ ಕಲಾಂಟ್ರವರ್ಸಿಗಳಿಂದಲೇ ಸುದ್ದಿಯಾದವರೇ ಇದ್ದರು.. ಸ್ಪರ್ಧಿಗಳ ಪೈಕಿ ಪೂನಂ ಪಾಂಡೆ ಸಹ ಒಬ್ಬರು..
ಮೊದಲ ಆವೃತ್ತಿ ಶನಿವಾರದಂದು ಗ್ರಾಂಡ್ ಫಿನಾಲೆ ಮೂಲಕ ಮುಗಿಸಲಾಗಿದೆ.. ಮುನಾವರ್ ಫರುಕಿ ವಿಜೇತರಾಗಿ ಹೊರಹೊಮ್ಮಿದರು, ಆದರೆ ಪಾಯಲ್ ರೋಹಟಗಿ ಮೊದಲ ರನ್ನರ್ ಅಪ್ ಆಗಿದ್ದರು. ಅಂಜಲಿ ಅರೋರಾ ಎರಡನೇ ರನ್ನರ್ ಅಪ್ ಆದರು. ಮುನಾವರ್ ಮತ್ತು ಪಾಯಲ್ಗೆ ಹೋಲಿಸಿದರೆ ಅಂಜಲಿಯ ಪ್ರಯಾಣವು ನಿಜವಾಗಿಯೂ ಪ್ರಭಾವಶಾಲಿಯಾಗಿಲ್ಲ ಎಂಬ ಅಭಿಪ್ರಾಯ ಕಂಗನಾ ಅವರದ್ದು.
ಏಕ್ತಾ ಕಪೂರ್ ನಿರ್ಮಿಸಿದ ಈ ಕಾರ್ಯಕ್ರಮದಲ್ಲಿ ಜೈಲಿನಂತಹ ಸನ್ನಿವೇಶ ಸೃಷ್ಟಿಸಲಾಗಿತ್ತು.. 20 ಸ್ಪರ್ಧಿಗಳನ್ನುಒಳಗೊಂಡಿತ್ತು..
ಸೈಶಾ ಶಿಂಧೆ, ಪೂನಂ ಪಾಂಡೆ, ಕರಣ್ವೀರ್ ಬೋಹ್ರಾ, ಅಲಿ ಮರ್ಚೆಂಟ್, ಜೀಶನ್ ಖಾನ್, ಮಂದನಾ ಕರಿಮಿ, ನಿಶಾ ರಾವಲ್, ಸಾರಾ ಖಾನ್, ವಿನಿತ್ ಕಾಕರ್, ಬಬಿತಾ ಫೋಗಟ್, ಸ್ವಾಮಿ ಚಕ್ರಪಾಣಿ, ತೆಹ್ಸೀನ್ ಪೂನವಾಲಾ, ಸಿದ್ಧಾರ್ಥ ಶರ್ಮಾ ಮತ್ತು ಚೇತನ್ ಹಂಸರಾಜ್ ಗಮನ ಸೆಳೆದರೂ ಎಲಿಮಿನೇಟ್ ಆದರು. ಬಹುಮಾನದ ಮೊತ್ತವು 5 ಲಕ್ಷದಿಂದ 25 ಲಕ್ಷದವರೆಗೆ ಇರುತ್ತದೆ ಎಂದು ಹೇಳಲಾಗುತ್ತಿದೆ.. ಎಪಿಸೋಡ್ ಗಳು ALTBalaji ಮತ್ತು MXPlayer ನಲ್ಲಿ ಸ್ಟ್ರೀಮ್ ಆಗುತ್ತದೆ.