ಕೇರಳದ ಖ್ಯಾತ ಬಹುಭಾಷಾ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ (2017) ದಲ್ಲಿ ಅನೇಕರ ಹೆಸರುಗಳಿದ್ದು , ನಟ ದಿಲೀಪ್ ಕುಮಾರ್ ಸಹ ಪ್ರಮುಖ ರೋಪಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು..
ಅಂದ್ಹಾಗೆ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಗೋಸ್ಕರ ನಟಿಗೆ ಕಿರುಕುಳ ನೀಡಲಾಗಿದೆ ಎಂಬುದನ್ನ ಸಾಬೀತು ಪಡಿಸುವಂತಹ ಸ್ಪೋಟಕ ವಾಯ್ಸ್ ಮೆಸೇಜ್ ಒಂದು ಇತ್ತೀಚೆಗೆ ವೈರಲ್ ಆಗಿ , ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು..
ಇದೀಗ ಕಾವ್ಯಾ ಮಾಧವನ್ ವಿಚಾರಣೆಗೆ ಕ್ರೈಂ ಬ್ರಾಂಚ್ ಮತ್ತೊಂದು ಹೊಸ ನೋಟಿಸ್ ನೀಡಿದೆ..
ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ವಿಚಾರಣೆಗೆ ಕರೆಯಲಾಗಿದೆ. ಕಾವ್ಯಾ ಮಲಯಾಳಂನ ಪ್ರಸಿದ್ಧ ನಟಿ ಮತ್ತು ಪ್ರಮುಖ ಆರೋಪಿ ನಟ ದಿಲೀಪ್ ಅವರ ಪತ್ನಿ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಕಾವ್ಯಾಳನ್ನು ಅಲುವಾದಲ್ಲಿರುವ ನಿವಾಸದಲ್ಲಿ ವಿಚಾರಣೆ ನಡೆಸಬಹುದು ಎಂದು ಕ್ರೈಂ ಬ್ರಾಂಚ್ಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಕ್ರೈಂ ಬ್ರಾಂಚ್ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಕ್ರೈಂ ಬ್ರಾಂಚ್ ಆಕೆಯನ್ನು ಪ್ರಶ್ನಿಸಲು ನೋಟಿಸ್ ನೀಡುತ್ತಿರುವುದು ಇದು ಎರಡನೇ ಬಾರಿ….
2017ರ ಹಲ್ಲೆಗೆ ಬದುಕುಳಿದ ವ್ಯಕ್ತಿ ಮತ್ತು ನಟನ ನಡುವಿನ ವೈಷಮ್ಯವೇ ಕಾರಣ ಎಂದು ದಿಲೀಪ್ ಅವರ ಸೋದರ ಮಾವ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದರಿಂದ ಕಾವ್ಯಾ ಹೇಳಿಕೆ ನಿರ್ಣಾಯಕವಾಗಿದೆ….
ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ವಿವಾಹವಾಗಿದ್ದ ದಿಲೀಪ್ ಅವರು ನವೆಂಬರ್ 25, 2016 ರಂದು ಕಾವ್ಯಾರನ್ನು ವಿವಾಹವಾದರು.. ಈ ದಂಪತಿಗೆ ಅಕ್ಟೋಬರ್ 19, 2018 ರಂದು ಮಗಳು ಜನಿಸಿದ್ದಳು..
ಕಾವ್ಯಾ ಮಾಲಿವುಡ್ ನ ಪ್ರಸಿದ್ಧ ನಟಿಯರಲ್ಲಿ ಒಬ್ಬರು, 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ನಟನೆಯ ಜೊತೆಗೆ, ಗಾಯಕಿ ಸಹ ಹೌದು…