ಖ್ಯಾತ ಗಾಯಕರಾದ ಅಜಯ್ ವಾರಿಯರ್ ಬೆಂಗಳೂರಿನಲ್ಲಿ ಗುಂಡಿಗೆ ಬಿದ್ದು ಕಾಲಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದಾರೆ.. ಎರಡು ದಿನಗಳ ಹಿಂದೆಯಷ್ಟೇ ಕಿರುತೆರೆ ನಟಿ ಸುನೇತ್ರ ಪಂಡಿತ್, ಅವೈಜ್ಞಾನಿಕ ಹಂಪಿನಿಂದಾಗಿ ಬಿದ್ದು ಆಸ್ಪತ್ರೆ ಸೇರಿಕೊಂಡಿದ್ದರು.
ಇದೀಗ ಗುಂಡಿಗೆ ಬಿದ್ದು ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್ ಕಾಲು ಮುರಿದುಕೊಂಡಿದ್ದಾರೆ.
ಅಜಯ್ ವಾರಿಯರ್ ಕೇರಳಕ್ಕೆ ಹೋಗಲು ರೈಲು ನಿಲ್ದಾಣಕ್ಕೆ ಹೊರಟಿದ್ದ ವೇಳೆ ಧಾರಾಕಾರ ಮಳೆ ಸುರಿದಿದೆ.. ಹೀಗಾಗಿ ಓಲಾ ಗಾಗಿ ಮುಖ್ಯರಸ್ತೆ ಕಡೆಗೆ ನಡೆಯುತ್ತಿದದ್ದ ವೇಳೆ ಮೆಟ್ರೊ ನಿಲ್ದಾಣದ ಮುಖ್ಯರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ಫುಟ್ ಪಾತ್ ಮೇಲೆ ನಡೆಯುವಾಗ ಗುಂಡಿಗೆ ಕಾಲಿಟ್ಟು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ..
ಅಲ್ಲದೇ ಗುಂಡಿಗೆ ಅಜಯ್ ಬಿದ್ದಾಗ ಎದೆಯೊರೆಗೂ ನೀರು ಬಂದಿದ್ದು ಕೈಯಲ್ಲಿ ಸೂಟ್ ಕೇಸ್ ಇದ್ದ ಕಾರಣ, ಅವರು ಭಾರೀ ಅಪಘಾತದಿಂದ ತಪ್ಪಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.. ಸೂಟ್ ಕೇಸ್ ಇಲ್ಲದೇ ಹೋಗಿದ್ದರೆ ಗುಂಡಿಯಲ್ಲಿ ಮುಳುಗುವ ಅಪಾಯವಿತ್ತು ಎಂದು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.. ಅಪಘಾತವಾದ ತಕ್ಷಣವೇ ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆ ಎಂದೂ ತಿಳಿಸಿದ್ದಾರೆ.