Avatar 2 ಟೀಸರ್ ಗೆ ಫ್ಯಾನ್ಸ್ ಫಿದಾ..!!! ನೀರಿನ ಮೇಲೆಯೇ ಈ ಬಾರಿ ಸಾಹಸ..!!
ಇಡೀ ವಿಶ್ವವೇ ಕಾಯುತ್ತಿರುವ ಮೋಸ್ಟ್ ಆಂಟಿಸಿಪೇಟೆಡ್ ಹಿಸ್ಟರಿ ಕ್ರಿಯೇಟರ್ 3D ಸಿನಿಮಾ Avatar 2 …. ಇಡೀ ವಿಶ್ವಾದ್ಯಂತ ಕಾತರದಿಂದ ಕಾಯ್ತಾಯಿದ್ದಾರೆ.. ಅವತಾರ್ ಭಾಗ ಒಂದು ರಿಲೀಸ್ ಆದ ಬರೋಬ್ಬರಿ 13 ವರ್ಷಗಳ ನಂತರ ಅವತಾರ್ ರಿಲೀಸ್ ಆಗ್ತಿದೆ.. ಅವತಾರ್ 2 ಸಿನಿಮಾ ರಿಲೀಸ್ ಡೇಟ್ ಈ ಹಿಂದೆಯೇ ಅನೌನ್ಸ್ ಆಗಿತ್ತು.. ಇದೀಗ ‘ಅವತಾರ್ 2’ ಟೀಸರ್ ಬಿಡುಗಡೆಗೆ ದಿನಾಂಕ ಪ್ರಕಟವಾಗಿದೆ..
ಅಷ್ಟೇ ಅಲ್ದೇ ಟೀಸರ್ ಈಗಾಗಲೇ ರಿಲೀಸ್ ಆಗಿದೆ.. 2009ರಲ್ಲಿ ಹಾಲಿವುಡ್ ಲೆಜಂಡರಿ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಠಿಸಿದ ಅದ್ಭುತ ದೃಶ್ಯಕಾವ್ಯ ಅವತಾರ್ ಸಿನಿಮಾ.
ಇದರ ಮುಂದುವರಿದ ಭಾಗವೇ ‘ಅವತಾರ್: ದಿ ವೇ ಆಫ್ ವಾಟರ್’. ಚಿತ್ರವು ಡಿಸೆಂಬರ್ 16 ರಂದು ವಿಶ್ವದಾದ್ಯಂತ 160 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ, ಚಿತ್ರದ ಟೀಸರ್ ಅನ್ನು ‘ಡಾಕ್ಟರ್ ಸ್ಟ್ರೇಂಜ್: ಇನ್ ದಿ ಮಲ್ಟಿವರ್ಸಸ್ ಆಫ್ ಮ್ಯಾಡ್ನೆಸ್’ ರಿಲೀಸ್ ಆದ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ.
ಅವತಾರ್: ದಿ ವೇ ಆಫ್ ವಾಟರ್‘ ಟೀಸರ್ ಇತ್ತೀಚೆಗೆ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆಯಾಗಿದೆ.
ಬೆರಗುಗೊಳಿಸುವ ಸ್ಥಳಗಳು ಮತ್ತು ಬೆರಗುಗೊಳಿಸುವ ನೀಲಿ ಸಮುದ್ರಗಳೊಂದಿಗೆ ಪಂಡೋರಾ ಗ್ರಹದ ದೃಶ್ಯಗಳೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ.
ಟೀಸರ್ ಇಂಟ್ರೆಸ್ಟಿಂಗ್ ಆಗಿದ್ದರೂ ಸಿನಿಮಾ ಕಥೆ ಸದ್ಯಕ್ಕೆ ಸಸ್ಪೆನ್ಸ್. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಆಗಿರುವ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.
ಚಿತ್ರವು ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ, 2024 ರಲ್ಲಿ ಅವತಾರ್ 3, 2026 ರಲ್ಲಿ ಅವತಾರ್ 4 ಮತ್ತು 2028 ರಲ್ಲಿ ಅವತಾರ್ 5 ಸಿನಿಮಾ ರಿಲೀಸ್ ಆಗಲಿದೆ.
ನ್ಯೂಜಿಲೆಂಡ್ನಲ್ಲಿ 2ನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಇನ್ನೂ ಈವರೆಗೂ 2ನೇ ಭಾಗವೇ ರಿಲೀಸ್ ಆಗಿಲ್ಲ. ಅದಾಗಲೇ 3ನೇ ಭಾಗದ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವತಾರ್ ಸರಣಿಯ ಒಟ್ಟು ಐದು ಸಿನಿಮಾಗಳು ತಯಾರಾಗಲಿವೆ. ಈಗ ಅವತಾರ್ 2 ಮತ್ತು ಅವತಾರ್ 3 ತಯಾರಾಗುತ್ತಿದೆ. ನಂತರ ಅವತಾರ್ 4 ಮತ್ತು ಅವತಾರ್ 5 ಚಿತ್ರೀಕರಣ ಪ್ರಾರಂಭವಾಗಲಿದೆ. ಅವತಾರ್ 4 ಡಿಸೆಂಬರ್ 18, 2026 ಕ್ಕೆ ಬಿಡುಗಡೆ ಆಗಲಿದೆ. ಅವತಾರ್ 5 ಡಿಸೆಂಬರ್ 22, 2028 ಕ್ಕೆ ಬಿಡುಗಡೆ ಆಗಲಿದೆ.