ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದಿಂದಾಗಿ ರಾಜಮಾರ್ತಾಂಡ ಚಿತ್ರದ ಡಬ್ಬಿಂಗ್ ಕಾರ್ಯಗಳು ಪೂರ್ಣಗೊಂಡಿರಲಿಲ್ಲ. ಹೀಗಾಗಿ ಧ್ರುವ ಸರ್ಜಾ ಈಗ ಡಬ್ಬಿಂಗ್ ಮುಗಿಸಿದ್ದು, ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜಮಾರ್ತಾಂಡ ಗೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.
ಮೈಕ್ ಮುಂದೆ ನಿಂತು ಧ್ರುವ ಸರ್ಜಾ ಅಣ್ಣನ ದೃಶ್ಯಗಳಿಗೆ ಡಬ್ಬಿಂಗ್ ಮಾಡುತ್ತಿರುವ ವೀಡಿಯೊ ಅಭಿಮಾನಿಗಳ ಮನ ಕಲುಕಿದೆ. ‘ಸಮಧಾನ ಸಮಾಧಾನ.. ಅಕ್ಕ ತಂಗಿಯಂದಿರೇ.. ಅಣ್ಣ-ತಮ್ಮಂದಿರೇ.. ಬಂಧು ಬಾಂಧವರೇ.. ನನ್ನನ್ನ ನಂಬಿ ಓಟ್ ಹಾಕಿ. ನನ್ನ ಕೊನೆ ಉಸಿರಿರುವವರೆಗೂ ನಿಮ್ಮಗಳಿಗೋಸ್ಕರನೇ ಹೋರಾಡ್ತೀನಿ’ ಎಂದು ಡೈಲಾಗ್ ಹೊಡೆಯವ ವೀಡಿಯೋ ಬಿಡುಗಡೆಯಾಗಿದೆ.
‘ರಾಜಮಾರ್ತಾಂಡ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬರದಿಂದ ಸಾಗುತ್ತಿವೆ. ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಇನ್ನೂ ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ದಿನಾಂಕನ್ನು ಚಿತ್ರತಂಡ ಘೋಷಣೆ ಮಾಡಲಿದೆ.
ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೊನೆಯ ಬಾರಿಗೆ ಚಿರಂಜೀವಿ ಸರ್ಜಾರನ್ನು ಬೆಳ್ಳಿ ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.