ಕೇರಳದ ಖ್ಯಾತ ಬಹುಭಾಷಾ ನಟಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ (2017) ದಲ್ಲಿ ಅನೇಕರ ಹೆಸರುಗಳಿದ್ದು , ನಟ ದಿಲೀಪ್ ಕುಮಾರ್ ಸಹ ಪ್ರಮುಖ ರೋಪಿಯಾಗಿದ್ದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು..
ಅಂದ್ಹಾಗೆ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಗೋಸ್ಕರ ನಟಿಗೆ ಕಿರುಕುಳ ನೀಡಲಾಗಿದೆ ಎಂಬುದನ್ನ ಸಾಬೀತು ಪಡಿಸುವಂತಹ ಸ್ಪೋಟಕ ವಾಯ್ಸ್ ಮೆಸೇಜ್ ಒಂದು ಇತ್ತೀಚೆಗೆ ವೈರಲ್ ಆಗಿ , ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು..
ಇದೀಗ ಕಾವ್ಯಾ ಮಾಧವನ್ ವಿಚಾರಣೆಗೆ ಕ್ರೈಂ ಬ್ರಾಂಚ್ ಮತ್ತೊಂದು ಹೊಸ ನೋಟಿಸ್ ನೀಡಿದ ಬೆನ್ನಲ್ಲೇ ನಟಿ ವಿಚಾರಣೆಗೆ ಹಾಜರಾಗಿದ್ದಾರೆ..
ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಅನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ವಿಚಾರಣೆ ನಡೆಸಿದ್ದಾರೆ.
2017 ರಲ್ಲಿ ಮಲಯಾಳಂ ಸ್ಟಾರ್ ನಟಿಯನ್ನು ಅಡ್ಡಗಟ್ಟಿದ್ದ ಗುಂಪೊಂದು ಆಕೆಯ ಅಪಹರಣ ಮಾಡಿ ಆಕೆಯ ಮೇಲೆ ದೌರ್ಜನ್ಯ ಎಸಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಸರ್ ಸುನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಂತರ ಮಲಯಾಳಂನ ಸ್ಟಾರ್ ನಟ ದಿಲೀಪ್ ಹೇಳಿದಂತೆ ಪಲ್ಸರ್ ಸುನಿ ಹಾಗೂ ಇತರರು ನಟಿಯ ಮೇಲೆ ದೌರ್ಜನ್ಯ ಎಸಗಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯಾ ವಿಚಾರಣೆ ನಡೆಸಲಾಗ್ತಿದೆ.. ಕಾವ್ಯಾ ಮಲಯಾಳಂನ ಪ್ರಸಿದ್ಧ ನಟಿ ಮತ್ತು ಪ್ರಮುಖ ಆರೋಪಿ ನಟ ದಿಲೀಪ್ ಪತ್ನಿ.
ಕ್ರೈಂ ಬ್ರಾಂಚ್ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಕ್ರೈಂ ಬ್ರಾಂಚ್ ಆಕೆಯನ್ನು ಪ್ರಶ್ನಿಸಲು ನೋಟಿಸ್ ನೀಡಿರುವುದು ಇದು ಎರಡನೇ ಬಾರಿ.
2017ರ ಹಲ್ಲೆಗೆ ಬದುಕುಳಿದ ವ್ಯಕ್ತಿ ಮತ್ತು ನಟನ ನಡುವಿನ ವೈಷಮ್ಯವೇ ಕಾರಣ ಎಂದು ದಿಲೀಪ್ ಅವರ ಸೋದರ ಮಾವ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದರಿಂದ ಕಾವ್ಯಾ ಹೇಳಿಕೆ ನಿರ್ಣಾಯಕವಾಗಿದೆ.
ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ವಿವಾಹವಾಗಿದ್ದ ದಿಲೀಪ್ ಅವರು ನವೆಂಬರ್ 25, 2016 ರಂದು ಕಾವ್ಯಾರನ್ನು ವಿವಾಹವಾದರು.. ಈ ದಂಪತಿಗೆ ಅಕ್ಟೋಬರ್ 19, 2018 ರಂದು ಮಗಳು ಜನಿಸಿದ್ದಳು..
ಕಾವ್ಯಾ ಮಾಲಿವುಡ್ ನ ಪ್ರಸಿದ್ಧ ನಟಿಯರಲ್ಲಿ ಒಬ್ಬರು, 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ನಟನೆಯ ಜೊತೆಗೆ, ಗಾಯಕಿ ಸಹ ಹೌದು…
ಪ್ರಕರಣದ ಆರಂಭದಿಂದಲೂ ಕಾವ್ಯಾ ಮಾಧವನ್ಗೆ ಪ್ರಕರಣದ ಬಗ್ಗೆ ಗೊತ್ತಿತ್ತು, ಹಾಗೂ ಕಾವ್ಯಾ ಮಾಧವನ್ ಒತ್ತಾಯದ ಮೇರೆಗೆ ದಿಲೀಪ್, ನಟಿಯ ವಿರುದ್ಧ ದೌರ್ಜನ್ಯ ಎಸಗಲು ಪಲ್ಸರ್ ಸುನಿಗೆ ಸೂಚಿಸಿದ್ದ ಎನ್ನಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಕ್ರೈಂ ಬ್ರ್ಯಾಂಚ್ ಪೊಲೀಸರು, ಕಾವ್ಯಾ ಮಾಧವನ್ ಅನ್ನು ದಿಲೀಪ್ರ ಅಲುವಾದ ನಿವಾಸದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಕಾವ್ಯಾ ಮಾಧವನ್ ಅನ್ನು, ನಟಿಯ ಮೇಲೆ ದೌರ್ಜನ್ಯ ಹಾಗೂ ವಿಚಾರಣಾ ಅಧಿಕಾರಿಯ ಕೊಲೆಗೆ ಯೋಜನೆ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ.
ಎರಡೂ ಪ್ರಕರಣದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲವೆಂದು ಕಾವ್ಯಾ ಮಾಧವನ್ ಹೇಳಿದ್ದಾರೆ. ಆದರೆ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳು ಕಾವ್ಯಾರನ್ನು ಮತ್ತೊಮ್ಮೆ ವಿಚಾರಣೆ ಮಾಡಲು ಯೋಜಿಸಿದ್ದಾರೆ ಎನ್ನಲಾಗಿದೆ..