ತಮಿಳುನಾಡಿನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು : KGF 2 , Beast ಗೆ ಯಾವ ಸ್ಥಾನ
26 ನೇ ದಿನವೂ ಬಾಕ್ಸ್ ಆಫೀಸ್ ರೂಲ್ ಮಾಡುತ್ತಾ ಬಾಲಿವುಡ್ ಸಿನಿಮಾಗಳನ್ನೇ ಸೋಲಿಸಿ ದೇಶಾದ್ಯಂತ ಅಬ್ಬರಿಸುತ್ತಿರುವ KGF 2 ಸಿನಿಮಾ ಈಗಾಗಲೇ ವರ್ಲ್ಡ್ ವೈಡ್ ಸುಮಾರು 1160 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.. ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾವಾಗಿರುವ ಈ ಸಿನಿಮಾ ದಂಗಲ್ ರೆಕಾರ್ಡ್ರ ಚೂರ್ ಚೂರ್ ಮಾಡಿದೆ..
ಇದೀಗ ತಮಿಳುನಾಡಿನಲ್ಲೂ ಹೊಸ ದಾಖಲೆ ಬರೆದಿದೆ.. ಕಳೆದ ವಾರದ ಆರಂಭದಲ್ಲಿ ತಮಿಳುನಾಡಿನಲ್ಲಿ 100 ಕೋಟಿ ಕ್ಲಬ್ ಸೇರಿದ್ದ ಡಬ್ಬಿಂಗ್ ಸಿನಿಮಾವೆಂಬ ದಾಖಲೆ ಬರೆದಿದ್ದ ಸಿನಿಮಾವೀಗ ಈ ವಾರದಲ್ಲಿ 5 ಕೋಟಿ ರೂ. ಕಲೆಕ್ಷನ್ ಮಾಡಿದ್ದು ಒಟ್ಟಾರೆ 105.70 ಕೋಟಿ ರೂ. ತಮಿಳು ಆವೃತ್ತಿಯಿಂದ ಸಂಗ್ರಹಿಸುವ ಮೂಲಕ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಟಾಪ್ 10 ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದೆ..
KGF 2 ಗಿಂತ ಒಂದು ದಿನ ಮುಂಚಿತವಾಗಿಯೇ ರಿಲೀಸ್ ಆದ ದಳಪತಿ ವಿಜಯ್ ನಟನೆಯ Beast ಅಷ್ಟಾಗಿ ದೇಶಾದ್ಯಂತ ಮೋಡಿ ಮಾಡಲಿಲ್ಲ.. ಬಾಕ್ಸ್ ಆಫೀಸ್ ನಲ್ಲಿ ಫ್ಲಾಪ್ ಸಾಬೀತಾಗಿದೆ..
ತಮಿಳುನಾಡಿನಲ್ಲೂ KGF 2 Beast ನ ಡಾಮಿಟನೇಟ್ ಮಾಡಿದೆ..
ಕೆಜಿಎಫ್ 2 ಕ್ಕೆ ಒಂದು ದಿನ ಮೊದಲು ಬಿಡುಗಡೆಯಾಯಿತು, ವಿಜಯ್ ಅಭಿನಯದ ಬೀಸ್ಟ್ ದಾಖಲೆಯ ಓಪನಿಂಗ್ ಕಂಡಿತ್ತು.. ಆದರೆ ವಾರಾಂತ್ಯದ ನಂತರ ಡಲ್ ಆಯ್ತು…
ತಮಿಳುನಾಡಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ ಹತ್ತು ಚಿತ್ರಗಳು ಈ ಕೆಳಗಿನಂತಿವೆ:
1. ಬಾಹುಬಲಿ 2 ರೂ. 146 ಕೋಟಿ
2. ಮಾಸ್ಟರ್ – ರೂ. 141.80 ಕೋಟಿ
3. ಬಿಗಿಲ್ – ರೂ. 140.50 ಕೋಟಿ
4. ಸರ್ಕಾರ್ – ರೂ. 131 ಕೋಟಿ
5. ವಿಶ್ವಾಸಂ – ರೂ. 128 ಕೋಟಿ
6. ಮೆರ್ಸಲ್ – ರೂ. 126.70 ಕೋಟಿ
7. ಬೀಸ್ಟ್ – ರೂ. 120 ಕೋಟಿಗಳು (27 ದಿನಗಳು)
8. 2.0 – ರೂ. 113.20 ಕೋಟಿ
9. ಕೆಜಿಎಫ್ 2 – ರೂ. 105.70 ಕೋಟಿಗಳು (26 ದಿನಗಳು)
10. ಪೆಟ್ಟಾ – ರೂ. 104 ಕೋಟಿ
ಪಟ್ಟಿಯಲ್ಲಿ ವಿಜಯ್ ಪ್ರಾಬಲ್ಯ ಹೊಂದಿದ್ದಾರೆ, ಅವರು 2017 ರಿಂದ ಅದ್ಭುತ ಫಾರ್ಮ್ನಲ್ಲಿದ್ದಾರೆ. 5 ವರ್ಷಗಳ ನಂತರವೂ ಬಾಹುಬಲಿ 2 ಅಗ್ರಸ್ಥಾನದಲ್ಲಿದೆ. KGF 2 ಟಾಪ್ 10 ರಲ್ಲಿದೆ.. ಇನ್ನೂ ಸಿನಿಮಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದ್ದು , ಶೀಘ್ರವೇ 110 ಕೋಟಿ ಕಲೆಕ್ಷನ್ ದಾಟಲೂ ಬಹುದು.. ಅಷ್ಟೇ ಅಲ್ಲ ನಾವು ಗಮನಿಸಬೇಕಾದ ವಿಚಾರವೆಂದ್ರೆ ಈ ಪಟ್ಟಿಯಲ್ಲಿ ಸ್ಥಾನದ ಪಡೆದ ಏಕೈಕ ತಮಿಳೇತ್ತರ ಸಿನಿಮಾ ಇದಾಗಿದೆ.. ಇನ್ನೂ ವಲಿಮೈ ಹನ್ನೊಂದನೇ ಸ್ಥಾನದಲ್ಲಿದ್ದರೆ , RRR 80 ಕೋಟಿ ಕಲೆಕ್ಷನ್ ಮಾಡುವ ಮೂಲಕ 12 ನೇ ಸ್ಥಾನದಲ್ಲಿದೆ..