ಏಪ್ರಿಲ್ 13 ರಂದು ರಿಲೀಸ್ ಆದ ಬೀಸ್ಟ್ KGF 2 ಮುಂದೆ ಡಲ್ ಆಗಿದೆ.. ತಮಿಳುನಾಡಿನಲ್ಲೂ ಬೀಸ್ಟ್ ಮುಂದೆ KGF 2 ಅಬ್ಬರಿಸುತ್ತಿದೆ.. ಬೀಸ್ಟ್ ಸಿನಿಮಾಗೆ ಹೇಳಿಕೊಳ್ಳುವಂತಹ ಉತ್ತಮ ರೆಸ್ಪಾನ್ಸ್ ಸಿಗ್ತಿಲ್ಲ.. ವಿಜಯ್ ಅವರ ಅಪಿಯರೆನ್ಸ್ ಅವರ ನಟನೆಗೆ ಫುಲ್ ಮಾರ್ಕ್ಸ್ ಸಿಕ್ರೂ ,,, ಸಿನಿಮಾ ಬಗ್ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿಲ್ಲ..
ಈ ರೀತಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟುಹಾಕಿ ಟುಸಸ್ ಆದ ಬೀಸ್ಟ್ ಸಿನಿಮಾ ದಳಪತಿ ಅಭಿಮಾನಿಗಳ ಡಿಸಪಾಯಿಂಟ್ ಮೆಂಟ್ ಗೆ ಕಾರಣವಾಗಿದೆ..
ದಳಪತಿ ವಿಜಯ್ ಬೀಸ್ಟ್ ಆರಂಭಿಕ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನವನ್ನು ಕಂಡಿತು. ಎರಡನೇ ವಾರದಲ್ಲಿ ಚಿತ್ರವು ವೇಗವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿತ್ತು.
KGF 2 ಜೊತೆಗೆ ತೀವ್ರ ಸ್ಪರ್ಧೆ ಬೀಸ್ಟ್ ಗೆ ದೊಡ್ಡ ಹೊಡೆತ ನೀಡಿದೆ..
ಅಂದ್ಹಾಗೆ ವಿಜಯ್ ಮತ್ತು ಪೂಜಾ ಹೆಗ್ಡೆಯವರ Beast ಈಗ ಒಟಿಟಿಯಲ್ಲಿ ಮೊಡಿ ಮಾಡುತ್ತಿದೆ.
ಥಿಯೇರ್ ಗಳಲ್ಲಿ ಏಪ್ರಿಲ್ 13 ಕ್ಕೆ ರಿಲೀಸ್ ಆಗಿದ್ದ ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಇದೀಗ ಒಟಿಟಿಯಲ್ಲಿ ಲಭ್ಯವಿದೆ.. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿದೆ.. KGF 2 ಸಿನಿಮಾ ಮುಂದೆ BEAST ಅಷ್ಟಾಗಿ ಅಬ್ಬರಿಸಲಿಲ್ಲ.. ಆದ್ರೆ ವಿಶ್ವದಾದ್ಯಂತ ಬೀಸ್ಟ್ ಸಿನಿಮಾ 240 ಕೋಟಿ ರೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವುದೂ ಸುಳ್ಳಲ್ಲ..
ಸದ್ಯ ಈಗ ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಆಕ್ಷನ್ ಥ್ರಿಲರ್ ಸಿನಿಮಾ ಈಗ (ಮೇ 11) ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗ್ತಿದೆ.. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬೀಸ್ಟ್ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬೀಸ್ಟ್ ಸಿನಿಮಾ ಸ್ಟ್ರೀಮ್ ಆಗ್ತಿದೆ..