ತಮಿಳಿನ ಸ್ಟಾರ್ ನಟ ಧನುಶ್ ಅವರು ಬಾಲಿವುಡ್ ನಲ್ಲೂ ನಟಿಸಿದ್ದಾರೆ,,, ಈಗ ಹಾಲಿವುಡ್ ನ ಗ್ರೇ ಮ್ಯಾನ್ ಸಿನಿಮಾದಲ್ಲೂ ಕಾಣಿಸಿಕೊಳ್ತಿದ್ದಾರೆ… ಧನುಶ್ ಅವರು ಸಿನಿ ಜರ್ನಿ ಆರಂಭಿಸಿ 2 ದಶಕ ಕಳೆದಿದೆ.. ಅಭಿಮಾನಿಗಳು ಧನುಶ್ ಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಸಿನಿಮಾ ಉದ್ಯಮದಲ್ಲಿ 2 ದಶಕಗಳನ್ನು ಪೂರ್ಣಗೊಳಿಸಿದ ಧನುಷ್ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಅಭಿಮಾನಿಗಳಿಗೆ ಧನ್ಯವಾದಗಳನ್ನ ಅರ್ಪಿಸಸಿದ್ದಾರೆ..
ತಮ್ಮ ವೃತ್ತಿಜೀವನದಲ್ಲಿ 46 ಚಿತ್ರಗಳಲ್ಲಿ ನಟಿಸಿರುವ ಧನುಷ್ ಉದ್ಯಮದಲ್ಲಿ 2 ದಶಕಗಳನ್ನು ಪೂರ್ಣಗೊಳಿಸಿದ್ದಾರೆ.
ಧನುಷ್ ತನ್ನ ತಂದೆ ಕಸ್ತೂರಿ ರಾಜಾ ನಿರ್ದೇಶಿಸಿದ 2002 ರಲ್ಲಿ ತೆರೆಕಂಡ ತುಳ್ಳುವದೋ ಇಳಮೈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.. ಅಂದಿನಿಂದ ಹಿಂತಿರುಗಿ ನೋಡಲಿಲ್ಲ. ನಾನು ಇಷ್ಟು ದೂರ ಬರುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ಧನುಷ್ ಭಾವುಕರಾಗಿ ಬರೆದಿದ್ದಾರೆ.
“ನೀವು ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾಗ ಜೀವನವು ಏನಾಗುತ್ತದೆ ಎಂದು ನಾನು ಎಲ್ಲೋ ಓದಿದ್ದೇನೆ. ನಾನು ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಒಂದು ಜೀವನವನ್ನು ಸಾರ್ಥಕಗೊಳಿಸೋಣ. ಅದನ್ನು ಲೆಕ್ಕ ಹಾಕೋಣ” ಎಂದು ಅವರು ಪತ್ರವನ್ನು ಕೊನೆಗೊಳಿಸಿದರು.