KGF 2 ಬ್ಲಾಕ್ ಬಾಸ್ಟರ್ ಹಿಟ್ ಆಗಿದೆ.. 1200 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಹೊಸ ದಾಖಲೆ ಬರೆದಿದೆ.. ವಿಶ್ವಾದ್ಯಂತ ಅತಿ ಹೆಚ್ಚ ಗಳಿಸಿದ 3 ನೇ ಭಾರತೀಯ ಸಿನಿಮಾವಾದ್ರೆ , ಭಾರತದಲ್ಲಿ 2 ನೇ ಸ್ಥಾನದಲ್ಲಿದೆ.. ಸಿನಿಮಾ ಸಕ್ಸಸ್ ನ ಖುಷಿಯೊಂದಿಗೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಯಶ್ ಇದೀಗ ಮನೆಯಲ್ಲಿ ಮಕ್ಕಳ ಜೊತೆಯಲ್ಲಿ ಅರಾಮವಾಗಿ ಕಾಲಕಳೆಯುತ್ತಿದ್ದಾರೆ.
ಮಕ್ಕಳಾದ ಐರಾ ಮತ್ತು ಯಥರ್ವ ಜೊತೆ ಸೇರಿಕೊಂಡು ಸಂತಸದಿಂದ ನಲಿಯುತ್ತಿದ್ದಾರೆ. ಈ ಸಂತಸದ ಸಮಯದ ವಿಡಿಯೋವನ್ನು ಯಶ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.
ಯಶ್ ಹಂಚಿಕೊಂಡಿರುವ ವೀಡಿಯೋದಲ್ಲಿ ತಮ್ಮ ಮುದ್ದು ಮಕ್ಕಳಾದ ಐರಾ ಮತ್ತು ಯಥರ್ವ ಆಟವಾಡುತ್ತಿದ್ದಾರೆ. ಯಥರ್ವ ತಂದೆಗೆ ಐ ಲವ್ ಯೂ ಹೇಳಿ ನಾನು ದೈತ್ಯ ಡೈನೋಸಾರ್ ಎಂದು ಕಿರುಚುತ್ತಾನೆ. ಆಗ ಹೆದರಿದಂತೆ ನಟಿಸುವ ಯಶ್ ,ನಾನು ಈಗ ಹುಲಿಯಾಗುವುದನ್ನು ನೋಡು ಎಂದು ಹುಲಿ ರೀತಿ ಘರ್ಜಿಸಿದಾಗ ಯಥರ್ವ ಅಲ್ಲಿಂದ ಹೆದರಿ ಓಡಿ ಹೋಗುತ್ತಾನೆ. ಬಳಿಕ ಅಲ್ಲಿಯೇ ಇದ್ದ ಮಗಳನ್ನು ತಬ್ಬಿಕೊಂಡ ಯಶ್ ಗಣೇಶಾ ಓಡಿ ಹೋದ ಮಗಳೇ ಎಂದು ಮುದ್ದಾಡುತ್ತಾರೆ.