KGF 2 : ಡಾಕ್ಟರ್ ಸ್ಟ್ರೇಂಜ್ ಮುಂದೆಯೇ ಬಾಕ್ಸ್ ಆಫೀಸ್ ನಲ್ಲಿ ರಾಕಿ ಭಾಯ್ ಅಬ್ಬರ ನಿಂತಿಲ್ಲ..!!
ಎಲ್ಲಿ ನೋಡಿದ್ರೂ ರಾಕಿ ಗುಣಗಾನ ,,, ಯಾರ್ ನೋಡಿದ್ರೂ ಪ್ರಶಾಂತ್ ನೀಲ್ ಸಿನಿಮಾದ ಬಗ್ಗೆಯೇ ಚರ್ಚೆ… ಕೆಜಿಎಫ್ ಬಗ್ಗೆಯೇ ಮಾತುಕತೆ… ಸಿನಿಮಾ ಬಾಕ್ಸ್ ಆಫೀಸ್ ನನಲ್ಲಿ ಧೂಳೆಬ್ಬಿಸುತ್ತೆದೆ.. ಗ್ಲೋಬಲ್ ನಲ್ಲಿ ರೂಲ್ ಮಾಡ್ತಿದೆ.. ಬಾಕ್ಸ್ ಆಫೀಸ್ ನಲ್ಲಿ 1100 ಕೋಟಿ ಕಲೆಕ್ಷನ್ ದಾಟಿ ದಂಗಲ್ ರೆಕಾರ್ಡ್ ಚೂರ್ ಚೂರು ಮಾಡಿದೆ,..
ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತುಫಾನ್ ಎಬ್ಬಿಸಿದೆ.
ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಎಂಟರ್ ಟೈನರ್ ಆಗಿ ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿಯೂ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಬಾಕ್ಸ್ ಆಫೀಸ್ ನಲ್ಲಿ ಡಾಕ್ಟರ್ ಸ್ಟ್ರೇಂಜ್ ರಾಕಿ ಭಾಯ್ ಗೆ ಟಕ್ಕರ್ ಕೊಡೋಕೆ ಬಂದ್ರು ರಾಕಿ ಭಾಯ್ ಹವಾ ಮಾತ್ರ ಕೊಂಚವೂ ತಗ್ಗಿಲ್ಲ.. ಈಗಲೂ ಬಾಕ್ಸ್ ಆಫೀಸ್ ರೂಲ್ ಮಾಡುತ್ತಿರುವುದು KGF 2 ನೇ..
ಸಿನಿಮಾ 28 ನೇ ದಿನವೂ ಬಾಕ್ಸ್ ಆಫೀಸ್ ಡಾಮಿನೇಟ್ ಮಾಡ್ತಿದೆ.. ವರ್ಲ್ಡ್ ವೈಡ್ ಸಿನಿಮಾ 1200 ಕೋಟಿ ಕಲೆಕ್ಷನ್ ದಾಟಿದ್ರೂ ಇನ್ನೂ ಕ್ರೇಜ್ ತಗ್ಗಿಲ್ಲ.. ಅದ್ರಲ್ಲೂ ಹಾಲಿವುಡ್ ಸಿನಿಮಾ ಡಾಕ್ಟರ್ ಸ್ಟ್ರೇಂಜ್ ನ ಎಫೆಕ್ಟ್ ಕೂಡ ಸಿನಿಮಾಗೆ ತಟ್ಟಿಲ್ಲ..
25ನೇ ದಿನ ಹಾಗೂ 26ನೇ ದಿನಕ್ಕೆ ಹೋಲಿಸಿದರೆ, 28ನೇ ದಿನ ‘ಕೆಜಿಎಫ್ 2’ ಕಲೆಕ್ಷನ್ ಇಳಿಕೆ ಕಂಡಿದೆ.
ಅಂದ್ಹಾಗೆ ಸಿನಿಮಾ ನೋಡಿದವರಿಗೆ ಚಾಪ್ಟರ್ 3 ಬಂದೇ ಬರುತ್ತೆ ಅಂತ ಅನ್ಸೋದ್ರಲ್ಲಿ ಅನುಮಾನವಿಲ್ಲ.. ಕೆಜಿಎಫ್ ಚಷಾಪ್ಟರ್ ಸುಳಿವನ್ನ ಸಿನಿಮಾದಲ್ಲಿ ನೀಡಲಾಗಿದೆ.. ಅಧಿಕೃತವಾಗಿ ಘೋಷಣೆಯಾಗಿಲ್ಲವಾದ್ರೂ ಸೋಷಿಯಲ್ ಮೀಡಿಯದಲ್ಲಿ KGF 3 ಗೆ ಬೇಡಿಕೆ ಹೆಚ್ಚಾಗಿದೆ..