ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ಅನ್ಸಿದ್ದನ್ನೇ ಹೇಳ್ತಾರೆ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ.. ಇದೀಗ ಬಾಲಿವುಡ್ ಬಗ್ಗೆ ಮಾತನಾಡಿದ ಹಿನ್ನೆಲೆ ಮಹೇಶ್ ಬಾಬು ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..
ಹೌದು..! ಬಾಲಿವುಡ್ ಬಗ್ಗೆ ಮಹೇಶ್ ಬಾಬು ಅವರ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು..
ಇದೀಗ ಇದೇ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮ್ ಗೋಪಾಲ್ ವರ್ಮಾ ಅವರು ಮಹೇಶ್ ಬಾಬು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂದು ಅರ್ಥವೇ ಆಗುತ್ತಿಲ್ಲ ಎಂದು ಹೇಳಿದ್ದಾರೆ..
ಅಲ್ಲದೇ ಒಬ್ಬ ನಟನಾಗಿ ಇದು ಅವರ ಆಯ್ಕೆಯಾಗಿದೆ. ಆದರೆ ಬಾಲಿವುಡ್ ಅವರನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವುದು, ನನಗೆ ಅರ್ಥವಾಗಲಿಲ್ಲ. ಅವರ ಮಾತಿನ ಅರ್ಥವನ್ನು ಅರ್ಥಮಾಡಿಕೊಳ್ಳಲು ನನಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇತ್ತೀಚಿನ ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡಿದರೆ, ಡಬ್ ಮಾಡಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಆ ಚಿತ್ರಗಳೂ ಹೆಚ್ಚಿನ ಹಣವನ್ನು ಗಳಿಸಿವೆ.
ಹಾಗೆಯೇ, ಬಾಲಿವುಡ್ ಎನ್ನುವುದು ಒಂದು ಕಂಪನಿಯಲ್ಲ. ಇದು ಮಾಧ್ಯಮಗಳು ನೀಡುವ ಲೇಬಲ್. ವೈಯಕ್ತಿಕವಾಗಿ ಸಿನಿಮಾ ಕಂಪನಿ ಅಥವಾ ನಿರ್ಮಾಣ ಸಂಸ್ಥೆಯು ನಿರ್ದಿಷ್ಟ ವೆಚ್ಚದಲ್ಲಿ ಚಿತ್ರ ಮಾಡಲು ನಿಮ್ಮನ್ನು ಕೇಳುತ್ತದೆ, ಹಾಗಾಗಿ ಅವರು ಬಾಲಿವುಡ್ ಅನ್ನು ಹೇಗೆ ಸಾಮಾನ್ಯೀಕರಿಸುತ್ತಾರೆ. ನನಗೆ ಅದು ಅರ್ಥವಾಗುತ್ತಿಲ್ಲ. ಬಾಲಿವುಡ್ ಒಂದು ಕಂಪನಿಯಲ್ಲ, ಆದ್ದರಿಂದ ಅವರ ಮಾತುಗಳು ಅರ್ಥವಾಗುತ್ತಿಲ್ಲ ಎಂದಿದ್ದಾರೆ.