Sunny Leone
ಇಂದು ಬಾಲಿವುಡ್ ನ ಹಾಟ್ ಬೆಡಗಿ , ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬ.. ಸನ್ನಿ ಲಿಯೋನ್ ಕಳೆದ ಒಂದು ದಶಕದಲ್ಲಿ ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನದಲ್ಲಿ ಬಹಳ ದೂರ ಸಾಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.. ಕನ್ನಡದಲ್ಲೂ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ..
ಜಿಸ್ಮ್ 2 ಸಿನಿಮಾ ಮೂಲಕ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು.. 2016 ರಲ್ಲಿ, ಸನ್ನಿ ಲಿಯೋನ್ ಸಂದರ್ಶನವೊಂದರಲ್ಲಿ ಲೈಂಗಿಕ ಮತ್ತು ಆಕ್ರಮಣಕಾರಿ ಪ್ರಶ್ನೆಗಳನ್ನು ಎದುರಿಸಿದರು. ಅವರು ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದ್ದರು..
ಸನ್ನಿ ವೃತ್ತಿ ಬದುಕಿನಲ್ಲಿ ಒಂದು ಛಾಪು ಮೂಡಿಸಿದ್ದಾರೆ.. ಕೆಲವು ವರ್ಷಗಳ ಹಿಂದೆ, ಸನ್ನಿಯನ್ನ ಸಂದರ್ಶನವೊಂದರಲ್ಲಿ ಅವಮಾನಿಸಲಾಗಿತ್ತು..
ಈ ಸಂದರ್ಶನದಲ್ಲಿ ವಯಸ್ಕ ಚಲನಚಿತ್ರ ತಾರೆಯಾಗಿ ತಮ್ಮ ವೃತ್ತಿಜೀವನದ ಬಗ್ಗೆ ಪ್ರತಿಕ್ರಿಯಿಸಲು ನಿರಂತರವಾಗಿ ಸನ್ನಿಯನ್ನು ಒತ್ತಾಯಿಸುತ್ತಿದ್ದರು. ಬಹಳಷ್ಟು ವಿವಾಹಿತ ಮಹಿಳೆಯರು ಸನ್ನಿ ಲಿಯೋನ್ ತಮ್ಮ ಗಂಡಂದಿರಿಗೆ ಬೆದರಿಕೆಯೆಂದು ನಂಬುತ್ತಾರೆ ಮತ್ತು ‘ಎಷ್ಟು ಜನರು ಪೋರ್ನ್ ಸ್ಟಾರ್ ಆಗಬೇಕೆಂದು ಯೋಚಿಸುತ್ತಾರೆ’ ಎಂಬಂತಹ ಸ್ತ್ರೀದ್ವೇಷ ಮತ್ತು ಹಿಂಜರಿಕೆಯ ಪ್ರಶ್ನೆಗಳನ್ನ ಸನ್ನಿ ಎದುರಿಸಬೇಕಾಯ್ತು..
ಸನ್ನಿ ಪ್ರತಿಕ್ರಿಯೆ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಗಳಿಸಿತ್ತು.. ಅವರು ಅವರ ನಡವಳಿಕೆಯನ್ನು ‘ಗ್ರೇಸ್ ಅಂಡರ್ ಫೈರ್’ ಎಂದು ಕರೆದರು.
ಆ ಸಂದರ್ಶನದಿಂದಲೇ ಸನ್ನಿ ಹಪರನಡೆದಿದ್ದರು.. ಅಲ್ಲದೇ ಅಲ್ಲೇ ಕುಳಿತಿದ್ದರೆ ಆತ ಹೇಳಿದ್ದೆಲ್ಲಾ ನಿಜವಾಗುತ್ತಿಒತ್ತು ಎಂದು ಸಾವೇಜ್ ಉತ್ತರ ನೀಡಿದ್ದರು..