ಕಮಲ್ ಹಾಸನ್ ಅವರ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ಸದ್ಯಕ್ಕೆ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ.. ಇದೇ ಶುಕ್ರವಾರ ಸಿನಿಮಾ ರಿಲೀಸ್ ಆಗ್ತಿದೆ.. ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ವಿಚಾರಗಳಿಂದ ಸುದ್ದಿಯಾಗ್ತಿದೆ..
ಸಿನಿಮಾದ ಬಜೆಟ್ , ಪ್ರಚಾರ , ಪ್ರೀ ಬ್ಯುಸಿನೆಸ್ ಇತ್ಯಾದಿ ವಿಚಾರವಾಗಿ ಸುದ್ದಿಯಲ್ಲಿದೆ.. ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿಕೊಂಡಿದೆ ಎಂದು ಬಾಕ್ಸ್ ಆಫೀಸ್ ರಿಪೋರ್ಟ್ ಹೇಳುತ್ತಿದೆ.
ಅಷ್ಟೇ ಅಲ್ಲ RRR , KGF 2 ನಂತರ ವಿಕ್ರಾಂತ್ ರೋಣ , ಚಾರ್ಲಿ 777 , ವಿಕ್ರಮ್ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು , ಈ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಲಿವೆ ಎಂದೇ ಅಂದಾಜಿಸಲಾಗಿದೆ..
ಕಮಲ್ ಹಾಸನ್, ವಿಜಯ್ ಸೇತು ಪತಿ ಮತ್ತು ಫಹಾದ್ ಕಾಂಬಿನೇಷನ್ ನ ಈ ಸಿನಿಮಾ ರಿಲೀಸ್ ಗೂ ಮುನ್ನವೇ 250 ಕೋಟಿ ರೂಪಾಯಿ ಗಳಿಸಿರುವ ಬಗ್ಗೆ ಸಿನಿಮಾ ಅಂಗಳದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.
ಮತ್ತೊಂದೆಡೆ ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಹಿಂಸೆ ವೈಭವೀಕರಣ ಕಾರಣಕ್ಕೆ ಒಟ್ಟು 13 ಕಡೆ ಕತ್ತರಿ ಪ್ರಯೋಗ ಮಾಡಿದೆ. ಸಿನಿಮಾ ಸುಮಾರು 4 ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಅಲ್ಲದೇ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸ್ಟೈಲ್ ಅನುಸರಿಸಸಿರುವ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ತಂಡ ಇಂದು (ಜೂನ್ 1ರಂದು) ರಾತ್ರಿ 8.10ಕ್ಕೆ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಚಿತ್ರದ ಕೆಲ ತುಣುಕುಗಳನ್ನು ಬಿತ್ತರಿಸಲು ಸಿದ್ಧತೆ ಮಾಡಿಕೊಂಡಿದೆ.