ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ.. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಸದ್ಯ ಬಾಲಿವುಡ್ ನಲ್ಲಿ ಈಗಾಗಲೇ ತಾವು ನಟಿಸಿರುವ ಎರೆಡು ಸಿನಿಮಾಗಳು ರಿಲೀಸ್ ಗೂ ಮೊದಲೇ ಮೂರನೇ ಹಿಂದಿ ಸಿನಿಮಾದಲ್ಲಿ ಬ್ಯುಸಿಯಿದ್ಧಾರೆ.. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಿದ್ದಾರೆ..
ಬಾಲಿವುಡ್ ನಲ್ಲಿ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿರುವ ಚಾಕ್ಲೆಟ್ ಬಾಯ್ ರಣಬೀರ್ ಜೊತೆಯಾಗಿ ನಟಿಸುತ್ತಿದ್ದಾರೆ.
ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ವಂಗಾ ನಿರ್ದೇಶನದ ಈ ಸಿನಿಮಾ ಇತ್ತೀಚೆಗಷ್ಟೇ ಮನಾಲಿಯಲ್ಲಿ ತನ್ನ ಮೊದಲ ಶೂಟಿಂಗ್ ಶೆಡ್ಯೂಲ್ ಮುಗಿಸಿದೆ.
ಯಾನಿಮನ್ ಸಿನಿಮಾ ಬಗ್ಗೆ ರಶ್ಮಿಕಾ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ನಾನು ಈ ಚಿತ್ರದ ಮೂಲಕವೇ ಮೊದಲ ಬಾರಿಗೆ ರಣಬೀರ್ ಅವರನ್ನು ಭೇಟಿ ಮಾಡಿದ್ದೇನೆ.
ಅವರೊಂದಿಗೆ ನಟಿಸಲು ಸ್ವಲ್ಪ ನರ್ವಸ್ ಆಗುತ್ತಿತ್ತು. ‘ವಾಸ್ತವವಾಗಿ ರಣಬೀರ್ ಒಬ್ಬ ಒಳ್ಳೆಯ ವ್ಯಕ್ತಿ ಆದ್ರೂ ನಾವು ಭೇಟಿಯಾದಾಗ ಮೊದಲಿಗೆ ಭಯವಾಗುತ್ತಿತ್ತು ಎಂದಿದ್ದಾರೆ.
ಸಂದೀಪ್ ಮತ್ತು ರಣಬೀರ್ ಜೊತೆ ಕೆಲಸ ಮಾಡುವುದು ಅದ್ಭುತವಾಗಿದೆ. ಆದರೆ ರಣಬೀರ್ ನನ್ನನ್ನು ಮೇಡಂ ಎಂದು ಕರೆಯುತ್ತಾರೆ.
ಚಿತ್ರರಂಗದಲ್ಲಿ ನನ್ನನ್ನು ಹಾಗೆ ಕರೆಯುವ ಏಕೈಕ ವ್ಯಕ್ತಿ ರಣಬೀರ್ ಕಪೂರ್. ಆದರೆ ಅವರು ನನಗೆ ಹಾಗೆ ಕರೆಯುವುದು ಇಷ್ಟವಿಲ್ಲ ಎಂದು ಮಂದಣ್ಣ ಹೇಳಿದ್ದಾರೆ.