ಸೌತ್ ಸಿನಿಮಾ ಇಂಡಡಸ್ಟ್ರಿಯಲ್ಲಿ ಲೇಡಿ ಪವರ್ ಸ್ಟಾರ್ , ಸಹಜ ಸುಂದರಿ , ರೌಡಿ ಬೇಬಿ ಸಾಯಿ ಪಲ್ಲವಿಗೆ ದೊಡ್ಡ ಫ್ಯಾಂಡಮ್ ಇದೆ… ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಷ್ಮಿಕಾ ಮಂದಣ್ಣ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು.. ಅಲ್ಲದೇ ಇಂಡಸ್ಟ್ರಿಗೆ ಸಾಯಿ ಪಲ್ಲವಿ ಯಾಕೆ ಲೇಡಿ ಪವರ್ ಸ್ಟಾರ್ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿತ್ತು.. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಸಿಡಿಸಿದ್ದು ಸಾಯಿ ಪಲ್ಲವಿಗೆ..
ಪ್ರೇಮಂ ಸಿನಿಮಾ ಮೂಲಕ ಇಂಡಸ್ಟ್ರತಿಗೆ ಪಾದಾರ್ಪಣೆ ಮಾಡಿದ ಡ್ಯಾನ್ಸಿಂಗ್ ಕ್ವೀನ್ , ತಮ್ಮ ನ್ಯಾಚುರಲ್ ಅದಾ ಮೂಲಕ ಅಭಿಮಾನಿಗಳನ್ನ ‘ಫಿದಾ’ ಆಗುವಂತೆ ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ..
ಸಾಯಿ ಪಲ್ಲವಿ ಇದೀಗ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ.. ಗಾರ್ಗಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡ್ತಿದ್ದಾರೆ.. ಈ ವಿಚಾರ ಗೊತ್ತೇ ಇದೆ..
ಸಾಯಿ ಪಲ್ಲವಿ ಡೀಸೆಂಟ್ ಅಲ್ಲೇ ಅತಿ ಡೇಸೆಂಟ್ ನಟಿ ಎನಿಸಿಕೊಳ್ಳುವವರು.. ತುಂಡುಡುಗೆ ಹಾಕದೇ , ಅತಿ ಹೆಚ್ಚು ಮೇಕಪ್ ಮಾಡದೇ ಎಲ್ಲರ ಮನಗೆದ್ದಿರುವ ನಟಿ…
ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಮಾತನಾಡಿದ್ದು, ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕರು ತೆಲುವು ಚೆನ್ನಾಗಿ ಮಾತನಾಡುತ್ತೀರಾ… ತೆಲುಗು ಹುಡುಗನನ್ನು ಮದುವೆ ಆಗುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಲ್ಲವಿ, ಕಾಲೇಜಿನಲ್ಲಿದ್ದಾಗ ನನಗೆ 23 ವರ್ಷಕ್ಕೆ ಮದುವೆ ಆಗುತ್ತದೆ.
30 ವರ್ಷ ಆಗುವಷ್ಟರಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಅಂದುಕೊಂಡಿದ್ದೆ ಅಂತಾ ಹೇಳಿದರು.
ಇನ್ನು ಸಿನಮಾದಲ್ಲಿ ಗ್ಲಾಮರ್ ಶೋ ಇಲ್ಲದೇ ಸ್ಟಾರ್ ನಟಿ ಆಗಿದ್ದೀರಾ..? ಹೀರೋಯಿನ್ ಅಂದ್ರೆ ತುಂಡು ತುಂಡು ಬಟ್ಟೆ ಹಾಕಿಕೊಳ್ಳುತ್ತಾರೆ.
ನೀವು ಯಾಕೆ ಅದಕ್ಕೆ ವಿರುದ್ಧವಾಗಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಸಾಯಿ ಪಲ್ಲವಿ, ಆ ರೀತಿ ಏನು ಇಲ್ಲ. ತುಂಡು ಬಟ್ಟೆ ತಪ್ಪು ಎಂದು ನಾನು ಹೇಳೋದಿಲ್ಲ.
ಆದ್ರೆ ಎದುರಿನ ಜನರು ನೋಡುವ ದೃಷ್ಟಿ ಬದಲಾದಾಗ ನನಗೆ ಕಾನ್ಫಿಡೆನ್ಸ್ ಬರುತ್ತದೆ ಎಂದು ಪಲ್ಲವಿ ಹೇಳಿದ್ದಾರೆ.