ಲೆಜೆಂಡರಿ ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ , ಲೋಕೇಶ್ ಕಾನಗರಾಜ್ ನಿರ್ದೇಶನದ ಮಲ್ಟಿಸ್ಟಾರ್ ಸಿನಿಮಾ ವಿಕ್ರಮ್ ಥಿಯೇಟರ್ ಗಳಲ್ಲಿ ಧೂಳೆಬ್ಬಿಸುತ್ತಿದೆ… ವಿಕ್ರಮ್ ಸಿನಿಮಾದ ಎದುರು ಬಾಲಿವುಡ್ ನ ಸ್ಟಾರ್ ಅಕ್ಷಯ್ ಕುಮಾರ್ ಪೃಥ್ವಿರಾಜ್ ಸಿನಿಮಾ ಕೂಡ ಫ್ಲಾಪ್ ಆಗಿದೆ.. ಈವರೆಗೂ ಥೆಯೇಟರ್ ಗಳಲ್ಲಿ ಸಿನಿಮಾ ಧೂಳೆಬ್ಬಿಸುತ್ತಿದ್ದು ಈಗಾಗಲೇ ಸಿನಿಮಾ 300 ಕೋಟಿ ಬಾಕ್ಸ್ ಆಫೀಸ್ ಕ್ಲಬ್ ಸೇರಿದೆ ಎಂದು ಹೇಳಲಾಗ್ತಿದೆ..
ಸಿನಿಮಾಗೆ ಎಲ್ಲೆಡೆಯಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ.. ಕಮಲ್ ಹಾಸನ್ ನಿರ್ಮಾಣದ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಸಹ ಹೈಲೇಟ್ ಆಗಿದ್ದಾರೆ.. ಸೂರ್ಯನ ಎಂಟ್ರಿ ಸಹ ಮಸ್ತ್ ಇದೆ.. ವಿಕ್ರಮ್ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ತಮಿಳುನಾಡಿನಲ್ಲಿ ಹೊಸ ದಾಖಲೆ ಬರೆದಿದೆ..
2022ರಲ್ಲಿ KGF 2 ಮತ್ತು ವಲಿಮೈ ನಂತರ ಅಗ್ರ ಮೂರನೇ ಅತಿ ಹೆಚ್ಚು ಗಳಿಕೆಯ ಸಿನಿಮಾದ ಸ್ಥಾನ ಪಡೆದಿದೆ..
ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ. ಗಳಿಸಿದೆ..
ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಹೊರತುಪಡಿಸಿ, ಸೂರ್ಯ ರೋಲೆಕ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕ್ರೇಜ್ ಹೆಚ್ಚಿಸಿದ್ದಾರೆ. ಈ ಚಿತ್ರದಲ್ಲಿ ಕಾಳಿದಾಸ್ ಜಯರಾಮ್, ನರೇನ್, ವಸಂತಿ, ಗಾಯತ್ರಿ ಮತ್ತು ಸತನ ಭಾರತಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ ಇತ್ತೀಚೆಗೆ ಈ ಸಿನಿಮಾದ ಸಕ್ಸಸ್ ನ ಸಂಭ್ರಮಾಚರಣೆಯಲ್ಲಿ ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ , ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಲು ಭಾಗಿಯಾಗಿ ಕಮಲ್ ಹಾಸನ್ ಅವರಿಗೆ ಅಭಿನಂದಿಸಿದ್ದರು..