ಲೋಕೇಶ್ ಕನಗರಾಜ್ ಅವರ ನಿರ್ದೇಶನ , ಲೆಜೆಂಡ್ ನಟ ಕಮಲ್ ಹಾಸನ್ ಅವರ ಅಭಿನಯದ ಮಲ್ಟಿಸ್ಟಾರ್ ಸಿನಿಮಾ ವಿಕ್ರಮ್ ಬಾಕ್ಸ್ ಆಫೀಸ್ ಶೇಕ್ ಮಾಡ್ತಿದೆ..
ಚಿತ್ರವು ಕೇರಳದ ಬಾಕ್ಸ್ ಆಫೀಸ್ನಲ್ಲಿಯೂ ಅಲೆ ಎಬ್ಬಿಸುತ್ತಿದೆ. ವರದಿಯ ಪ್ರಕಾರ, ಕಮಲ್ ಹಾಸನ್ ಅವರ ಆಕ್ಷನ್ ಥ್ರಿಲ್ಲರ್ ಕೇರಳ ಬಾಕ್ಸ್ ಆಫೀಸ್ನಲ್ಲಿ ರೂ 31.45 ಕೋಟಿಗಳನ್ನು ಗಳಿಸಿದೆ.
ಮೂಲಗಳ ಪ್ರಕಾರ, ಕೇರಳ ಬಾಕ್ಸ್ ಆಫೀಸ್ನಲ್ಲಿ ಯಾವುದೇ ತಮಿಳು ಚಿತ್ರವು ಇಷ್ಟು ದೊಡ್ಡ ಮೊತ್ತವನ್ನ ಇಷ್ಟು ಕಡಿಮೆ ಸಮಯದಲ್ಲಿ ಗಳಿಸಿಲ್ಲ ಎನ್ನಲಾಗಿದೆ.
ಲೋಕೇಶ್ ಕನಕರಾಜ್ ಅವರ ಚಿತ್ರವು ಕೇರಳ ಬಾಕ್ಸ್ ಆಫೀಸ್ನಲ್ಲಿ 31.45 ಕೋಟಿ ರೂಪಾಯಿಗಳನ್ನು ಗಳಿಸಿದೆ ಮತ್ತು ಚಿತ್ರವು ಆರಂಭಿಕ ಬಿಡುಗಡೆಯ 10 ನೇ ದಿನದಂದು 13.5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿದೆ.
ಕೇರಳದ ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ರೂಪಾಯಿ ದಾಟಿದ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ‘ವಿಕ್ರಮ್’ ಪಾತ್ರವಾಗಿದೆ ಮತ್ತು ಆಕ್ಷನ್ ಎಂಟರ್ಟೈನರ್ 7 ನೇ ದಿನದಲ್ಲಿ 10 ಕೋಟಿ ರೂಪಾಯಿ ಪಾಲನ್ನು ಹೊಂದಿದೆ ಎಂದು ಈ ಹಿಂದೆ ವರದಿಯಾಗಿದೆ. ಸದ್ಯದ ಟ್ರೆಂಡ್ ಮತ್ತು ಚಿತ್ರಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿರುವುದನ್ನು ಗಮನಿಸಿದರೆ, ಕಮಲ್ ಹಾಸನ್ ಅಭಿನಯದ ಚಿತ್ರವು ಮುಂಬರುವ ವಾರಗಳಲ್ಲಿ ಹೆಚ್ಚು ಗಳಿಸಲಿದೆ ಎಂದು ಖಚಿತಪಡಿಸಿಕೊಳ್ಳಬಹುದು.