Kamal Hassan : ದೊಡ್ಡ ಹೆಸರು ಬೇಡ ನನಗೆ ….. ಆದ್ರೆ….
ಸುಮಾರು ನಾಲ್ಕು ವರ್ಷಗಳ ನಂತರ, ಉಲಗ ನಾಯಗನ್ (ವಿಶ್ವ ನಾಯಕ) ಕಮಲ್ ಹಾಸನ್ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದಾರೆ.
ಅವರ ಇತ್ತೀಚಿನ ಚಿತ್ರ ‘ವಿಕ್ರಮ್’ ಬ್ಲಾಕ್ ಬಸ್ಟರ್ ಹಿಟ್. ಕಮಲ್ ಜೊತೆಗೆ ವಿಜಯ್ ಸೇತುಪತಿ, ಫಹಾದ್ ಫಾಜಿಲ್ ಮತ್ತು ಸೂರ್ಯ ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಲೋಕೇಶ್ ಕನಕರಾಜು ನಿರ್ದೇಶಿಸಿದ್ದಾರೆ.
ನಾಲ್ಕು ವರ್ಷಗಳ ನಂತರ, ಕಮಲ್ ಹಾಸನ್ ಈ ಚಿತ್ರದ ಮೂಲಕ ಪವರ್ ಫುಲ್ ಕಂ ಬ್ಯಾಕ್ ಮಾಡಿದ್ದಾರೆ.
ಈ ಸಿನಿಮಾ ಬಿಡುಗಡೆಯಾದ ಎರಡು ವಾರಗಳಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಈ ಬಗ್ಗೆ ಸ್ವತಃ ಕಮಲ್ ಹಾಸನ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆ ಒಂದು ಬಾರಿ ನಾನು 300 ಕೋಟಿ ಸಂಪಾದಿಸಬಲ್ಲೆ ಎಂದಾಗ ಯಾರೂ ಕೂಡ ನಂಬಿರಲಿಲ್ಲ.
ಅಸಲಿಗೆ ಅವರು ನಾನು ಹೇಳಿದ್ದನ್ನ ಅರ್ಥ ಮಾಡಿಕೊಂಡಿರಲಿಲ್ಲ. ಈಗ ವಿಕ್ರಂ ಬಾಕ್ಸ್ ಆಫೀಸ್ ಕಲೆಕ್ಷನ್ ನನ್ನ ಮಾತನ್ನ ನಿಜ ಮಾಡಿದೆ.
ಈಗ ನಾನು ನನ್ನ ಸಾಲವೆನ್ನಾ ತೀರಿಸುತ್ತೇನೆ. ನನಗೆ ಇಷ್ಟವಾದ ಆಹಾರವನ್ನು ಸೇವಿಸುತ್ತೇನೆ.
ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ನನ್ನ ಕೈಯಲ್ಲಿ ಆದ ಸಹಾಯವನ್ನು ಮಾಡುತ್ತೇನೆ.
ಒಂದು ವೇಳೆ ನನ್ನಲಿನ ಹಣ ಮುಗಿದು ಹೋದ್ರೆ ಹಣ ಕೊಡೋದಕ್ಕೆ ನನ್ನ ಬಳಿ ಹಣವಿಲ್ಲ ಅಂತಾ ಹೇಳುವೆ.
ಒಬ್ಬರ ಬಳಿ ಹಣ ಪಡೆದುಕೊಂಡು ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂದು ನನಗೆ ಅನಿಸುವುದಿಲ್ಲ.
ನನಗೆ ದೊಡ್ಡ ಹೆಸರು ಬೇಡ. ಒಳ್ಳೆ ವ್ಯಕ್ತಿಯಾದರೇ ಸಾಕು ಎಂದು ಕಮಲ್ ಹೇಳಿದ್ದಾರೆ.