ಕನ್ನಡ ಇಂಡಸ್ಟ್ರಿಯ ಟಾಪ್ ಆಂಕರ್ ಅನುಶ್ರೀ… ಅನುಶ್ರೀ ನಿರೂಪಕಿಯಾಗಿಯೇ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದು ಅತಿ ಹೆಚ್ಚು ಸಂಭಾವನೆಯನ್ನೂ ಪಡೆಯುವ ನಿರೂಪಕಿಯಾಗಿದ್ದಾರೆ.. ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.. ಇದೀಗ ಅನುಶ್ರೀ ಮದುವೆಯಾಗೋ ನಿರ್ಧಾರ ಮಾಡಿದ್ದಾರಂತೆ..
ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ ಕೂಡ ಖಾಸಗಿ ಶೋವೊಂದರಲ್ಲಿ ಅನುಶ್ರೀ ತಮಗೆ ಮದುವೆಯಾಗುವ ಆಸೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿವೊಂದರಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದ್ದು, ಆ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಅಂತಾ ಅನುಶ್ರೀ ಮುಕ್ತವಾಗಿ ಹಂಚಿಕೊಂಡಿದ್ದಾರೆ.