Rashmika Mandanna : ಅಭಿಮಾನಿ ಜೊತೆ ರಶ್ಮಿಕಾ ಮಂದಣ್ಣ ನಡೆದುಕೊಂಡ ರೀತಿಗೆ ಮೆಚ್ಚುಗೆ
ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾಗೆ ಟಾಲಿವುಡ್ ನಲ್ಲೂ ಬೇಡಿಕೆ ಕಮ್ಮಿಯಿಲ್ಲ.. ಕನ್ನಡದಿಂದ ಔಟ್ ಡೇಟೆಡ್ ಆಗಿದ್ದರೂ ಬಾಲಿವುಡ್ ನಲ್ಲಿಯೂ ಮಿಂಚುತ್ತಿದ್ದಾರೆ.. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಅಂದ್ಹಾಗೆ ತಮಿಳಿನಲ್ಲಿ ವಿಜಯ್ ಅವರ 66 ನೇ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಅನ್ನೋದು ಎಲ್ರಿಗೂ ಗೊತ್ತಿದೆ..
ಇತ್ತೀಚೆಗೆ ರಶ್ಮಿಕಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ .. ರಶ್ಮಿಕಾ ಅಭಿಮಾನಿ ಜೊತೆ ನಡೆದುಕೊಂಡ ವರ್ತನೆಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಆ ವೈರಲ್ ವಿಡಿಯೋದಲ್ಲಿ ರಶ್ಮಿಕಾ ಶೂಟಿಂಗ್ ಸ್ಪಾಟ್ನಲ್ಲಿದ್ದಾರೆ, ಅಲ್ಲಿಗೆ ಬಂದಿದ್ದ ಸಿನಿ ವರದಿಗಾರರ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಸೆಲ್ಫಿಗಾಗಿ ಈ ಸುಂದರಿಯತ್ತ ಧಾವಿಸಿದ್ದಾರೆ. ಇದನ್ನು ಗಮನಿಸಿದ ನಟಿಯ ಅಂಗರಕ್ಷಕ ಆತನನ್ನು ತಡೆಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ರಶ್ಮಿಕಾ ಸಿಬ್ಬಂದಿಗಳನ್ನ ತಡೆದು ಅಭಿಮಾನಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸೆಲೆಬ್ರಿಟಿ ಛಾಯಾಗ್ರಾಹಕರೊಬ್ಬರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಹಲವು ನೆಟ್ಟಿಗರು ರಶ್ಮಿಯನ್ನು ಹೊಗಳಿ ಪ್ರತಿಕ್ರಿಯಿಸಿದ್ದಾರೆ. ‘ವೆರಿ ಸ್ವೀಟ್’, ‘ದಕ್ಷಿಣ ನಟರು ತುಂಬಾ ನೀಟ್. ಬಾಲಿವುಡ್ ನಟರಂತಲ್ಲ’. ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸದ್ಯ ರಶ್ಮಿಕಾ ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪಾ ಚಿತ್ರದ ಎರಡನೇ ಭಾಗ, ತಮಿಳಿನಲ್ಲಿ ವಿಜಯ್ ಜೊತೆಗಿನ ಚಿತ್ರ, ಬಾಲಿವುಡ್ನಲ್ಲಿ ಮಿಸ್ಟರ್ ಮಜ್ನು, ಅನಿಮಲ್ ಮತ್ತು ಇತರ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.