ಸೌತ್ ಸಿನಿಮಾ ಇಂಡಡಸ್ಟ್ರಿಯಲ್ಲಿ ಲೇಡಿ ಪವರ್ ಸ್ಟಾರ್ , ಸಹಜ ಸುಂದರಿ , ರೌಡಿ ಬೇಬಿ ಸಾಯಿ ಪಲ್ಲವಿಗೆ ದೊಡ್ಡ ಫ್ಯಾಂಡಮ್ ಇದೆ… ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಷ್ಮಿಕಾ ಮಂದಣ್ಣ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು.. ಅಲ್ಲದೇ ಇಂಡಸ್ಟ್ರಿಗೆ ಸಾಯಿ ಪಲ್ಲವಿ ಯಾಕೆ ಲೇಡಿ ಪವರ್ ಸ್ಟಾರ್ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿತ್ತು.. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಸಿಡಿಸಿದ್ದು ಸಾಯಿ ಪಲ್ಲವಿಗೆ..
ಪ್ರೇಮಂ ಸಿನಿಮಾ ಮೂಲಕ ಇಂಡಸ್ಟ್ರತಿಗೆ ಪಾದಾರ್ಪಣೆ ಮಾಡಿದ ಡ್ಯಾನ್ಸಿಂಗ್ ಕ್ವೀನ್ , ತಮ್ಮ ನ್ಯಾಚುರಲ್ ಅದಾ ಮೂಲಕ ಅಭಿಮಾನಿಗಳನ್ನ ‘ಫಿದಾ’ ಆಗುವಂತೆ ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ..
ಗಾರ್ಗಿ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದು , ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ..
ಆಗಾಗ ಸಾಯಿ ಪಲ್ಲವಿ ಮದುವೆ ವಿಚಾರ ಚರ್ಚೆಯಾಗ್ತಲೇ ಇರುತ್ತೆ.. ಇತ್ತೇಚೆಗೆ ಸಾಯಿ ಪಲ್ಲವಿ ತಮ್ಮ ಮದುವೆ ವಿಚಾರವಾಗಿ ತಾವು ಕಂಡಿದ್ದ ಮದುವೆ ಕನಸಿನ ಬಗ್ಗೆ ಮಾತನಾಡಿದ್ದಾರೆ..
ಕೋವಿಡ್ ಸಮಯದಲ್ಲಿ ನನಗೆ ಮದುವೆ ಆಗುವಂತೆ ಪೋಷಕರಿಂದ ಒತ್ತಾಯವಿತ್ತು. ಅದಕ್ಕೂ ಮುನ್ನ ನಾನು ಸಾಕಷ್ಟು ಸಮಯ ಸಿನಿಮಾ ಶೂಟಿಂಗ್ನಲ್ಲಿಯೇ ಭಾಗವಹಿಸುತ್ತಿದ್ದೆ, ಹಾಗಾಗಿ ನನ್ನ ಪೋಷಕರಿಗೂ ಭಯವಾಗುತ್ತಿತ್ತು. ಜತೆಗೆ ಗ್ರಾಮದಲ್ಲಿ ನನ್ನ ಜೊತೆಗಿದ್ದ ಸಾಕಷ್ಟು ನನ್ನ ವಯಸ್ಸಿನ ಯುವತಿಯರಿಗೆ ಮದುವೆಯಾಗಿತ್ತು. ಸಹಜವಾಗಿ, ನನಗೂ ಮದುವೆಯಾಗುವಂತೆ ಮನೆಯಲ್ಲಿ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸಿತ್ತು. ನನಗೆ 23 ವಯಸ್ಸಿಗೆ ಮದುಯಾಗುತ್ತದೆ, 30 ವಯಸ್ಸಿನಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಕನಸು ಕಂಡಿದ್ದೆ. ಆದರೆ ಈಗ ದಾಂಪತ್ಯದ ಕುರಿತು ಯೋಚನೆ ಮಾಡಿದ್ರೆ, ನಾನು ಮದುವೆಯಾಗದಿದ್ದು ಒಳ್ಳೆಯದು ಅನಿಸುತ್ತಿದೆ. ಮದುವೆಯೆಂಬ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಪರಿಪಕ್ವತೆ ಬೇಕು. ಮಡದಿಯಾಗಿ, ತಾಯಿಯಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು.
ಈಗ ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮದುವೆಯ ವಿಚಾರದಲ್ಲಿ ನನಗೆ ಸಂಪೂರ್ಣ ಸ್ವತಂತ್ರ್ಯವಿದೆ. ಆದರೆ ಹುಡುಗ ಯಾರು ಸೆಲೆಕ್ಟ್ ಮಾಡ್ತಾರೆ ಗೊತ್ತಿಲ್ಲ. ಪೋಷಕರು ಆದ್ರು ಓಕೆ, ನಾನು ಹೇಳಿದ್ರು ಸರಿ ಸದ್ಯ ಈ ಕುರಿತು ಯೋಚನೆ ಮಾಡಿಲ್ಲ ಅಂತಾ ಮುಕ್ತವಾಗಿ ಸಾಯಿಪಲ್ಲವಿ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಸದ್ಯ ಸಾಯಿಪಲ್ಲವಿ ನಟನೆಯ `ಗಾರ್ಗಿ’ ಮತ್ತು `ವಿರಾಟ ಪರ್ವಂ’ ಚಿತ್ರಗಳು ರಿಲೀಸ್ಗೆ ರೆಡಿಯಿದೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು `ಪ್ರೇಮಂ’ ಬೆಡಗಿ ರೆಡಿಯಾಗಿದ್ದಾರೆ.