ಸದ್ಯ ಸಾಹೋ , ರಾಧೆ ಶ್ಯಾಮ್ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳ ನಂತರ ಬಾಹುಬಲಿ ಪ್ರಭಾಸ್ ಅವರ ಸಲಾರ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ.. ಸಲಾರ್ ಸಿನಿಮಾಗೆ KGF ಖ್ಯಾತಿಯ ಪ್ರಶಾಂತ್ ನೀಲ್ ಅವರ ನಿರ್ದೇಶನ ಮತ್ತಷ್ಟು ನಿರೀಕ್ಷೆ , ಕ್ರೇಜ್ ಹೆಚ್ಚಿಸಿದೆ..
ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಹೊಸ ಶೆಡ್ಯೂಲ್ ಶುರುವಾಗಿದೆ.
ಸದ್ಯ ಪ್ರಭಾಸ್ ಮೇಲೆ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.
ಈ ಸಾಹಸ ದೃಶ್ಯಗಳು ಇಂಟರ್ ವೆಲ್ ನಲ್ಲಿ ಬರಲಿವೆ ಎಂದು ಹೇಳಲಾಗುತ್ತಿದೆ.
ಈ ತಿಂಗಳಾಂತ್ಯಕ್ಕೆ ಈ ವೇಳಾಪಟ್ಟಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಜಗಪತಿ ಬಾಬು ಮತ್ತು ಮಲಯಾಳಂ ನಟ ಪೃಥ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವು ಮುಂದಿನ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಈ ಚಿತ್ರದ ಜೊತೆಗೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಸಿನಿಮಾವನ್ನೂ ಮಾಡುತ್ತಿದ್ದಾರೆ.
ಪ್ರಭಾಸ್ ನಾಯಕನಾಗಿ ನಟಿಸಿರುವ ‘ಆದಿಪುರುಷ’ ಮುಂದಿನ ವರ್ಷ ಜನವರಿ 12 ರಂದು ಬಿಡುಗಡೆಯಾಗಲಿದೆ.
ಮತ್ತೊಂದೆಡೆ, ಪ್ರಭಾಸ್ ನಿರ್ದೇಶನದ, ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ಅಭಿನಯದ ‘ಸ್ಪಿರಿಟ್’ ಸೆಟ್ಟೇರಲು ಸಜ್ಜಾಗಿದೆ.