ಇತ್ತೀಚೆಗೆ ಸೌತ್ ನ ಸ್ಟಾರ್ ನಟಿ ಸಾಯಿ ಪಲ್ಲವಿ ನೀಡಿದ್ದ ಹೇಳಿಕೆ ಸಾಕಷ್ಟು ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು , ಅವರ ವಿಕ್ರಮ್ ಪರ್ವ ಸಿನಿಮಾಗೆ ಅದು ಮೈನಸ್ ಪಾಯಿಂಟ್ ಆಗಿದೆ..
ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್ ನ ತೆಲುಗು ಸಿನಿಮಾ ‘ವಿರಾಟ ಪರ್ವಂ’ ಇಂದು ಬಿಡುಗಡೆ ಆಗಿದೆ. ಇದೊಂದು ನಕ್ಸಲ್ ಹಿನ್ನೆಲೆಯಾಗಿಟ್ಟುಕೊಂಡು ಮಾಡಿರುವ ಸಿನಿಮಾವಾಗಿದೆ. ನಕ್ಸಲ್ ಹೋರಾಟದಲ್ಲಿ ಭಾಗಿಯಾದ ಇಬ್ಬರು ಪ್ರೇಮಿಗಳ ಕಥೆಯಾಗಿದೆ.. ಆದ್ರೆ ಸಾಯಿ ಪಲ್ಲವಿ ಜೊತೆಗೆ ಈ ಸಿನಿಮಾದ ಬಾಯ್ಕಾಟ್ ಗೆ ಹಿಂದೂ ಪರ ಸಂಘಟನೆಗಳು ಕರೆ ಕೊಟ್ಟಿವೆ..
ಇತ್ತೀಚೆಗೆ ಸಂದರ್ಶನದಲ್ಲಿ ಸಾಯಿ ಪಲ್ಲವಿ ಮಾತನಾಡುತ್ತಾ, ‘ಕಾಶ್ಮೀರದಲ್ಲಿ ನಡೆದ ಪಂಡಿತರ ನರಮೇಧ ಮತ್ತು ಲಾಕ್‌ಡೌನ್ ವೇಳೆಯಲ್ಲಿ ಗೋವನ್ನು ತಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಜೈ ಶ್ರೀರಾಮ್ ಎಂದು ಕೂಗುತ್ತಾ ಮಾಡಿದ ಹತ್ಯೆ ಎರಡೂ ಒಂದೇ. ಧರ್ಮದ ಹೆಸರಿನಲ್ಲಿ ಮಾಡುವ ಹತ್ಯೆಯನ್ನು ಸಹಿಸಿಕೊಳ್ಳಬಾರದು’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಅವರ ಸಿನಿಮಾವನ್ನ ಬಾಯ್ಕಾಟ್ ಮಾಡಲು ಕರೆ ನೀಡಲಾಗಿದೆ..