ಕಾಶ್ಮೀರಿ ಪಂಡಿತರ ಹತ್ಯೆಗೆ ಗೋಕಳ್ಳನ ಹತ್ಯೆ ಹೋಲಿಕೆ : ಸಾಯಿ ಪಲ್ಲವಿ ವಿರುದ್ಧ ಕೇಸ್ ದಾಖಲು
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಲೇಡಿ ಪವರ್ ಸ್ಟಾರ್ , ಸಹಜ ಸುಂದರಿ , ರೌಡಿ ಬೇಬಿ ಸಾಯಿ ಪಲ್ಲವಿಗೆ ದೊಡ್ಡ ಫ್ಯಾಂಡಮ್ ಇದೆ… ಸಾಯಿ ಪಲ್ಲವಿಗೆ ಎಷ್ಟು ದೊಡ್ಡ ಅಭಿಮಾನಿಗಳ ಬಳಗವಿದೆ ಅನ್ನೋದಕ್ಕೆ ಒಂದು ಸಣ್ಣ ಝಳಕ್ ಇತ್ತೀಚೆಗೆ ರಷ್ಮಿಕಾ ಮಂದಣ್ಣ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲೇ ಸಿಕ್ಕಿತ್ತು..
ಅಲ್ಲದೇ ಇಂಡಸ್ಟ್ರಿಗೆ ಸಾಯಿ ಪಲ್ಲವಿ ಯಾಕೆ ಲೇಡಿ ಪವರ್ ಸ್ಟಾರ್ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿತ್ತು.. ಕಾರ್ಯಕ್ರಮ ರಶ್ಮಿಕಾ ಸಿನಿಮಾದೇ ಆದ್ರೂ ಅಲ್ಲಿದ್ದವರೆಲ್ಲಾ ನಾನ್ ಸ್ಟಾಪ್ ಚಪ್ಪಾಳೆ ಸಿಡಿಸಿದ್ದು ಸಾಯಿ ಪಲ್ಲವಿಗೆ..
ಪ್ರೇಮಂ ಸಿನಿಮಾ ಮೂಲಕ ಇಂಡಸ್ಟ್ರರಿಗೆ ಪಾದಾರ್ಪಣೆ ಮಾಡಿದ ಡ್ಯಾನ್ಸಿಂಗ್ ಕ್ವೀನ್ , ತಮ್ಮ ನ್ಯಾಚುರಲ್ ಅದಾ ಮೂಲಕ ಅಭಿಮಾನಿಗಳನ್ನ ‘ಫಿದಾ’ ಆಗುವಂತೆ ಮಾಡಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ..
ಗಾರ್ಗಿ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದು , ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ..
ಇಂಡಸ್ಟ್ರೀ ಗೆ ಬಂದ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಕ್ಕೇರಿದ ಪಲ್ಲವಿ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯ ಸಾಯಿ ಪಲ್ಲವಿ ವಿರಾಟ ಪರ್ವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಅವರ ನಟನೆಯ ಸಿನಿಮಾ ಇಂದು ರಿಲೀಸ್ ಆಗಿದೆ.. ರಾಣಾ ದಗ್ಗುಬಾಟಿ ಜೊತೆಗೆ ಈ ಸಿನಿಮಾದಲ್ಲಿ ನಕ್ಸಲೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..
ಆದ್ರೀಗ ಈ ಸಿನಿಮಾಗೆ ಕಂಟಕ ಎದುರಾಗಿದೆ.. ಅಷ್ಟೇ ಅಲ್ದೇ ಸಾಯಿ ಪಲ್ಲವಿ ಬಾಯ್ಕಾಟ್ ಟ್ರೆಂಡ್ ಆಗ್ತಿದೆ.. ಹಾಗೆ ಸಾಯಿ ಪಲ್ಲವಿ ವಿರುದ್ಧ ದೂರು ಕೂಡ ದಾಖಲಾಗಿದೆ.. ಅದಕ್ಕೆಲ್ಲಾ ಕಾರಣ ಸಿನಿಮಾದ ಕಥೆಯಾಗ್ಲಿ , ಸನ್ನಿವೇಶಗಳಾಗಲಿ ಅಲ್ಲ.. ಬದಲಾಗಿ ಸಾಯಿ ಪಲ್ಲವಿ ನೀಡಿದ್ದ ಒಂದು ಹೇಳಿಕೆ..
ಸಾಮಾನ್ಯವಾಗಿ ಸಾಯಿ ಪಲ್ಲವಿ ಯಾವತ್ತೂ ನೆಗೆಟಿವ್ ವಿಚಾರಗಳಿಂದ ಸುದ್ದಿಯಾಗಲ್ಲ.. ಟ್ರೋಲ್ ಆಗೋದಂತೂ ಅಪರೂಪದಲ್ಲೇ ಅಪರೂಪ… ಡೀಸೆಂಟ್ ನಟಿಯರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.. ಪ್ರತಿಭೆಯಲ್ಲಿ , ನೃತ್ಯದಲ್ಲಿ , ಉತ್ತಮ ವಿಚಾರಧಾರೆಯಲ್ಲೂ ಅವರೇ ಟಾಪ್ ಆಗಿದ್ದವರು..
ಸದಾ ತಮ್ಮ ಸ್ವೀಟ್ ನೇಚರ್ ನಿಂದಲೇ ಅಭಿಮಾನಿಗಳ ಮನ ಕದಿಯುವ ಸಾಯಿ ಪಲ್ಲವಿ ಇತ್ತೀಚೆಗೆ ನೀಡಿದ ಒಂದು ಹೇಳಿಕೆ ಮಾತ್ರ ಕೋಲಾಹಲ ಸೃಷ್ಟಿ ಮಾಡಿದೆ.. ಪರ ವಿರೋಧ ಚರ್ಚೆಗೆ ಗ್ರಾಸವಾಗಿ ಹಿಂದೂಪರ ಸಂಘಟನೆಗಳ ಕಣ್ ಕೆಂಪಾಗಿಸಿದೆ..
ಇತ್ತೀಚೆಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣೆ ಮಾಡುತ್ತಿದ್ದು ಮುಸ್ಲಿಂ ಹತ್ಯೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು ಎಂದು ಹೇಳಿಕೆ ನೀಡಿದ್ದರು..
ಇದೇ ಕಾರಣಕ್ಕೆ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆಗೆ ಗೋವು ಕಳ್ಳಸಾಗಾಣಿಕೆಯನ್ನು ಹೋಲಿಸಿರುವುದು ಸರಿಯಲ್ಲ ಎಂದು ವಾದ ನಡೆದಿದೆ. ಕಳ್ಳಸಾಗಾಣಿಕೆದಾರನಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿದ್ದಕ್ಕಾಗಿ ಭಜರಂಗ ದಳದ ನಾಯಕರು, ಹೈದರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..